ಉಡುಪಿಯದ್ದು ಮಠವೇ ಹೊರತು ದೇವಸ್ಥಾನವಲ್ಲ- ಸುಮಾ ವಸಂತ್
ಉಡುಪಿಯದ್ದು ಮಠವೇ ಹೊರತು ದೇವಸ್ಥಾನವಲ್ಲ- ಸುಮಾ ವಸಂತ್
‘ಉಡುಪಿ ಮಠ ಹಿಂದೂ ಧಾರ್ಮಿಕ ನಿಯಮದಡಿ ಬಾರದು’
ಅವರು ಶುಕ್ರವಾರ (ಆ.08) ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ವಿ. ಎಸ್. ಆಚಾರ್ಯ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಉಡುಪಿಯ ಅಷ್ಟಮಠದ ಸ್ವಾಮೀಜಿಗಳು ಮುಜರಾಯಿ ಇಲಾಖೆಯ ಕ್ರಮವನ್ನು ವಿರೋಧಿಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.
ಉಡುಪಿ ಮಠವನ್ನು ದೇವಸ್ಥಾನ ಎಂದು ಪರಿಗಣಿಸದೆಯೇ ಮಠವೆಂದು ಪರಿಗಣಿಸುವುದರಿಂದ ಹೊಸದಾಗಿ ರೂಪಿಸಲಾಗಿರುವ ದೇವಸ್ಥಾನಗಳ ಏಕ ರೂಪ ಸಂಹಿತೆಯು ಉಡುಪಿಗೆ ಅನ್ವಯವಾಗುವುದಿಲ್ಲ. ಸುಮಾ ವಸಂತ್ ಅವರ ಭರವಸೆಯಿಂದ ಅಷ್ಟ ಮಠದ ಸ್ವಾಮೀಜಿಗಳ ಬೇಡಿಕೆ ಈಡೇರುವ ನಿರೀಕ್ಷೆಯಿದೆ.
ಕಳೆದ ವರ್ಷ ಅಕ್ಟೋಬರ್‌ನಿಂದ ಜಾರಿಗೆ ಬಂದಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯದ ಅದಿನಿಯಮ 1997ರ ಕಾಯ್ದೆಯಡಿ ಸೇರಿಸಬೇಕಾದ ಸಂಸ್ಥೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಂದ ಪ್ರಕಟಿಸಲಾಗಿದೆ ಎಂದು ಸುಮಾ ವಸಂತ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications