ವರಮಹಾಲಕ್ಷ್ಮಿ ವ್ರತವೂ ಸುಷ್ಮಾಸ್ವರಾಜ್ ಬಳ್ಳಾರಿ ಮೋಹವೂ
ವರಮಹಾಲಕ್ಷ್ಮಿ ವ್ರತವೂ ಸುಷ್ಮಾಸ್ವರಾಜ್ ಬಳ್ಳಾರಿ ಮೋಹವೂ
ಕೇಂದ್ರ ಸಚಿವ ಅನಂತ್ ಕುಮಾರ್ ಮನೆಯಲ್ಲಿ ಸುಷ್ಮಾರಿಂದ ಲಕ್ಷ್ಮಿ ಪೂಜೆ
ವರ ಮಹಾಲಕ್ಷ್ಮೀ ಪೂಜೆಯ ನೆಪದಲ್ಲಿ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ಕೇಂದ್ರ ಆರೋಗ್ಯ ಮಂತ್ರಿ ಸುಷ್ಮಾ ಸ್ವರಾಜ್ ಕೇಂದ್ರ ಸಚಿವ ಅನಂತ್ ಕುಮಾರ್ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಸಿದರು.
ಅದು ರಾಜಕಾರಣಿಗಳ ಮಟ್ಟದ ಅದ್ಧೂರಿ ಪೂಜೆ. ಹೀಗೆ ಮುತ್ತೆೈದೆಯರ ಹಬ್ಬಕ್ಕೆ ಸತತ ಮೂರು ವರ್ಷಗಳಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಸುಷ್ಮಾ ತನ್ನ ಬಳ್ಳಾರಿ ಪ್ರೀತಿಯನ್ನು ಕಾಪಿಟ್ಟುಕೊಂಡೇ ಬಂದಿದ್ದಾರೆ. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಹಾಗೂ ಸುಷ್ಮಾ ಸ್ವರಾಜ್ ಜರತಾರಿ ಸೀರೆ ಉಟ್ಟು, ಲಕ್ಷ್ಮೀ ವಿಗ್ರಹ ಸ್ಥಾಪನೆ ಮಾಡಿ ಅರ್ಚನೆ ಹಾಗೂ ವಿಶೇಷ ಪೂಜೆ ಮಾಡಿದರು.
ಸುವಾಸಿನಿಯರಿಗೆ ಬಾಗಿನ ನೀಡಿ, ಸಿಹಿ ಉಂಡು ವರಮಹಾಲಕ್ಷ್ಮೀ ಹಬ್ಬ ಆಚರಿಸಿದರು.
ವಿರೋಧ ಪಕ್ಷದ ನಾಯಕಿ ಸೋನಿಯಾ ಬಳ್ಳಾರಿಯಲ್ಲಿ ಗೆದ್ದಿರುವುದಕ್ಕೆ ಕೃತಜ್ಞತಾ ಪೂರ್ವಕವಾಗಿ ಆಗಾಗ ಬಳ್ಳಾರಿ ವಿಸಿಟ್ ಮುಂದುವರೆಸಿದ್ದರೆ, ಸೋತರೂ ನಾ ನಿಮ್ಮ ಮರೆತಿಲ್ಲ ಎನ್ನುತ್ತಾ ಸುಷ್ಮಾ ಕೂಡ ಬಳ್ಳಾರಿ ಪ್ರೀತಿಯನ್ನು ತೋರಿಸುತ್ತಿದ್ದಾರೆ.
ಆದರೆ ಈ ಬಾರಿಯ ಭೇಟಿಯಲ್ಲಿ ಸುಷ್ಮಾ ಮಹತ್ವದ ಘೋಷಣೆಯಾಂದನ್ನು ಮಾಡಿದ್ದಾರೆ. ಆ ಮೂಲಕ ಬಳ್ಳಾರಿ ಮೇಲಿನ ತಮ್ಮ ಪ್ರೀತಿ ರಾಜಕೀಯ ಪ್ರೇರಿತವಲ್ಲ ಎಂದೂ ಹೇಳಿಕೊಂಡಿದ್ದಾರೆ. ‘ಇನ್ನು ಮುಂದೆ ನಾನೆಂದೂ ಬಳ್ಳಾರಿಯಿಂದ ಚುನಾವಣೆಗೆ ನಿಂತುಕೊಳ್ಳುವುದೇ ಇಲ್ಲ. ಬರೀ ಪ್ರೀತಿ ಮತ್ತು ಮೋಹದಿಂದ ಬಳ್ಳಾರಿಗೆ ನಾನು ಆಗಾಗ ಬರುತ್ತಿದ್ದೇನೆಯ ವಿನಃ ಈ ಭೇಟಿಗೂ ಚುನಾವಣೆಗೂ ಸಂಬಂಧವೇ ಇಲ್ಲ ಎಂದು ಸುಷ್ಮಾ ಶುಕ್ರವಾರ ಹೇಳಿದ್ದಾರೆ.
ವಿದೇಶಿ ಮಹಿಳೆ ಎಂಬ ಹಣೆಪಟ್ಟಿಯಾಂದಿಗೇ ಸೋನಿಯಾ 1999ರ ಲೋಕಸಭಾ ಚುನಾವಣೆಯನ್ನೆದುರಿಸಿದರೆ ತನ್ನ ದೊಡ್ಡ ಕುಂಕುಮ ಹಾಗೂ ಕನ್ನಡದಲ್ಲೇ ಮಾತನಾಡುವ ಪ್ರಯತ್ನದಿಂದ ಸುಷ್ಮಾ ಬಳ್ಳಾರಿ ಜನರನ್ನು ಗೆಲ್ಲಲು ಪ್ರಯತ್ನಿಸಿದ್ದರು. ಚುನಾವಣೆಯ ನಂತರವೂ ಪ್ರತಿ ವರ್ಷ ವರ ಮಹಾಲಕ್ಷ್ಮೀ ವ್ರತದಂದು ಬಳ್ಳಾರಿಗೆ ಭೇಟಿ ನೀಡಿ ತಮ್ಮ ಸಾಂಸ್ಕೃತಿಕ ಮೋಹ ಹಾಗೂ ಬಳ್ಳಾರಿ ಪ್ರೀತಿಯನ್ನು ಮೆರೆದಿದ್ದರು.
‘ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಮತ್ತೆ ಚುನಾವಣೆಗೆ ನಿಂತರೂ ನೀವು ಬಳ್ಳಾರಿಯಿಂದ ಸ್ಪರ್ಧಿಸುವುದಿಲ್ಲವೇ..?’ ಎಂಬ ಸುದ್ದಿಗಾರರ ಕೀಟಲೆಯ ಪ್ರಶ್ನೆಗೆ ಸುಷ್ಮಾ - ‘ಆಕಿನೂ ಇನ್ನು ಬಳ್ಳಾರಿಯಿಂದ ಸ್ಪರ್ಧಿಸುವುದಿಲ್ಲ. ಮತ್ತೆ ಸ್ಪರ್ಧಿಸುವವಳಾಗಿದ್ದರೆ ಬಳ್ಳಾರಿಯ ಬದಲಿಗೆ ಅಮೇಥಿಯನ್ನೇಕೆ ಕ್ಷೇತ್ರವನ್ನಾಗಿ ಉಳಿಸಿಕೊಳ್ಳುತ್ತಿದ್ದಳು?’ ಎಂಬ ಲೆಕ್ಕಾಚಾರದ ಉತ್ತರ ಮುಂದಿಡುತ್ತಾರೆ.
ಸುಷ್ಮಾರ ಈ ಬಾರಿಯ ಬಳ್ಳಾರಿ ಭೇಟಿಯಲ್ಲಿ ಎಫ್‌ಎಂ ರೇಡಿಯೋ ಕೇಂದ್ರ ಉದ್ಘಾಟನೆ, ಪ್ರಧಾನಿಗಳ ಸ್ವಾಸ್ಥ್ಯ ಸುರಕ್ಷಾ ಯೋಜನೆ ಉದ್ಘಾಟನೆ ಕಾರ್ಯಕ್ರಮಗಳೂ ಸೇರಿವೆ.
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications