ಅನಾರೋಗ್ಯದಿಂದ ಚೇತರಿಸಿಕೊಂಡ ಶತಾಯುಷಿ ಮೂರ್ತಿರಾವ್
ಅನಾರೋಗ್ಯದಿಂದ ಚೇತರಿಸಿಕೊಂಡ ಶತಾಯುಷಿ ಮೂರ್ತಿರಾವ್
ಮೂಳೆ ಮುರಿತದ ಆಘಾತದಿಂದ ದೇವರು ಖ್ಯಾತಿಯ ಎ.ಎನ್.ಮೂರ್ತಿರಾವ್ ಪಾರು
ಇತ್ತೀಚೆಗೆ, ಮುಂಜಾನೆ ವಾಯು ವಿಹಾರದ ಸಂದರ್ಭದಲ್ಲಿ ಮೂರ್ತಿರಾವ್ ಎಡವಿ ಬಿದ್ದು ಮೂಳೆ ಮುರಿತಕ್ಕೊಳಗಾಗಿದ್ದರು. ಇಸ್ರೋ ಬಡಾವಣೆಯ ತಮ್ಮ ನಿವಾಸದಿಂದ ವಾಕಿಂಗ್ ಹೊರಟ ಮೂರ್ತಿರಾಯರನ್ನು ಕೆಲವು ನಾಯಿಗಳು ಅಟ್ಟಿಸಿಕೊಂಡು ಬಂದು ಈ ಅವಘಡ ಸಂಭವಿಸಿತ್ತು . ಊರುಗೋಲಿನ ಸಹಾಯದಿಂದ ನಾಯಿಗಳನ್ನು ಬೆದರಿಸಲು ಮೂರ್ತಿರಾಯರು ಪ್ರಯತ್ನಿಸಿದರೂ, ಆಯ ತಪ್ಪಿ ಬಿದ್ದು ಗಾಯಗೊಂಡರು.
ವಾಯು ವಿಹಾರದ ಸಂದರ್ಭದಲ್ಲಿ ಮೂರ್ತಿರಾಯರ ಜೊತೆಗಿದ್ದ ಅವರ ಪುತ್ರ ಸುಬ್ಬರಾಮಯ್ಯ, ಅಪ್ಪ ಎಡವಿ ಬೀಳುವಾಗ ಅವರಿಗಿಂತ ಸ್ವಲ್ಪ ಮುಂದೆಯಿದ್ದರು. ಬಿದ್ದ ರಭಸಕ್ಕೆ ಹಿಂಬದಿಯ ಮೂಳೆ ಮುರಿದುಕೊಂಡಿದ್ದ ಮೂರ್ತಿರಾಯರು, ಚಿಕಿತ್ಸೆಯ ನಂತರ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಶತಾಯುಷಿ ಮೂರ್ತಿರಾಯರ ವಿಶ್ರಾಂತ ಜೀವನ ಸಂತೋಷಕರವಾಗಿರಲಿ. ನಾಯಿಗಳು ಮತ್ತೆ ಮೂರ್ತಿರಾಯರ ತಂಟೆಗೆ ಹೋಗದಿರಲಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications