ಆಂಧ್ರದ ಪೀಕಲಾಟ, ಕಾರಂಜಾ ನದಿ ನೀರಿಗಡ್ಡ ಬ್ಯಾರೇಜ್ !
ಆಂಧ್ರದ ಪೀಕಲಾಟ, ಕಾರಂಜಾ ನದಿ ನೀರಿಗಡ್ಡ ಬ್ಯಾರೇಜ್ !
ಬೀದರ್ ನಗರದಲ್ಲಿ ನೀರಿಗೆ ಮತ್ತೆ ತತ್ವಾರ
ಕಾರಂಜಾ ನದಿ ಬ್ಯಾರೇಜ್‌ಗೆ ಗೇಟುಗಳನ್ನು ನಿರ್ಮಿಸಿರುವುದರಿಂದ ಬೀದರ್ ಜಿಲ್ಲೆಗೆ ಏಕೈಕ ನೀರಾವರಿ ಮೂಲವಾಗಿದ್ದ ಕಾರಂಜಾ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಕಾರಂಜಾ ನದಿ ಬ್ಯಾರೇಜ್‌ಗೆ ಆಂಧ್ರದ ಜಹೀರಾಬಾದ್ ಬಳಿ ಗೇಟುಗಳನ್ನು ನಿರ್ಮಿಸಲಾಗಿದ್ದು, ಈ ಮಳೆಗಾಲದಲ್ಲಿ ತುಂಬಿ ಹರಿಯಬೇಕಾಗಿದ್ದ ಕಾರಂಜಾ ಜಲಾಶಯ ನೀರಿಲ್ಲದೆ ಒಣಗಿ ಹೋಗಿದೆ.
ಕಾರಂಜಾ ನದಿಯು ಮಾಂಜ್ರಾ ನದಿಯ ಉಪನದಿ. ಆಂಧ್ರದ ಕೋಹಿರ್‌ನಲ್ಲಿ ಉಗಮವಾಗಿ, ಭಂಗೂರು ಮೂಲಕ ಬೀದರ್ ಪ್ರವೇಶಿಸುತ್ತದೆ. ಬೀದರ್‌ನ ಹಳ್ಳಿಖೇಡ್ ಸಮೀಪ ಈ ನದಿಗೆ 217 ದಶಲಕ್ಷ ಸಾಮರ್ಥ್ಯದ 21 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸಲಾಗಿದೆ. ಕಾಮಗಾರಿ ಅಪೂರ್ಣವಾಗಿದ್ದರೂ ಈ ಅಣೆಕಟ್ಟಿನಿಂದಾಗಿ ಭಾಲ್ಕಿ ಮತ್ತು ಬೀದರ್‌ನ 88 ಸಾವಿರ ಎಕರೆ ಭೂಮಿಗೆ ಈ ಕಿರು ನೀರಾವರಿ ನೀರುಣಿಸುತ್ತದೆ.
ಮಾಂಜ್ರಾ ನದಿಯ ಬ್ಯಾರೇಜ್ ಕಾಮಗಾರಿಗಳನ್ನು ಆಂಧ್ರ ವಿರೋಧಿಸಿತ್ತು. ಆದರೆ ಆಂಧ್ರದ ವಿರೋಧವನ್ನು ಕರ್ನಾಟಕ ಲೆಕ್ಕಿಸದೇ ಇರುವುದರಿಂದ ಈಗ ಕಾರಂಜಾ ನದಿಯ ನೀರನ್ನು ಹಿಡಿದಿಡುವ ಉಪಾಯವನ್ನು ಆಂಧ್ರ ಹೂಡಿದೆ. ಬೀದರ್ ಜನತೆಗೆ ಮತ್ತೆ ನೀರಿಗೆ ತತ್ವಾರ ಬಂದಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications