‘ನನ್ನ ಗಂಡನ ಅಮೆರಿಕದಿಂದ ಗಡೀಪಾರು ಮಾಡಿ’
‘ನನ್ನ ಗಂಡನ ಅಮೆರಿಕದಿಂದ ಗಡೀಪಾರು ಮಾಡಿ’
ಮಗುವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಸಂಯೋಗಿತಾ ರೆಡ್ಡಿ ಎಂಬ ಹೆಣ್ಣು ಮಗಳು ಅಮೆರಿಕಾದಲ್ಲಿರುವ ತನ್ನ ಗಂಡನನ್ನು ಅಲ್ಲಿಂದ ಹೊರದೂಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಈ ಮನವಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಳಿಯಿದೆ. ನೀರಾವರಿ ವಿವಾದಗಳಲ್ಲಿ ವ್ಯಸ್ತರಾಗಿರುವ ಅವರಿಗೆ ಈ ಹೆಣ್ಣುಮಗಳ ಅಳಲಿಗೆ ಕಿವಿಕೊಡಲು ಬಿಡುವು ದೊರೆಯಲಿ.
ಆಕೆಯ ಜೊತೆಗೆ ಗಂಡನಿಲ್ಲ ; ಗಂಡ ಬಿಟ್ಟವಳು ಎಂಬ ಪಟ್ಟವಿದೆ !
ಅನಿವಾಸೀ ಭಾರತೀಯನಾದ ಆತನನ್ನು ಅಮೆರಿಕಾದಿಂದ ಗಡೀಪಾರು ಮಾಡಬೇಕು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಬಳಿ ದೂರಿತ್ತಿದ್ದಾಳೆ. ತನ್ನ ರೋಗಿಷ್ಟ ಮಗುವನ್ನು ಸಾವಿನ ದವಡೆಯಿಂದ ಪಾರು ಮಾಡಲು ಆಕೆ ಹೋರಾಡುತ್ತಿದ್ದಾಳೆ.
ಅಮೆರಿಕಾದಲ್ಲಿರುವ ತನ್ನ ಅನಿವಾಸಿ ಭಾರತೀಯ ಗಂಡನನ್ನು ಅಲ್ಲಿಂದ ಗಡೀಪಾರು ಮಾಡಬೇಕು. ಆ ಮೂಲಕ ತನ್ನ ಮಗುವನ್ನು ಉಳಿಸಿಕೊಡಬೇಕು ಎಂದು ಆಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಳಿ ಮನವಿ ಮಾಡಿಕೊಂಡಿದ್ದಾಳೆ.
ಆಕೆಯ ಹೆಸರು ಸಂಯೋಗಿತಾ ರೆಡ್ಡಿ.
ಸಂಯೋಗಿತಾ ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಸಂಸ್ಥೆ ನಡೆಸುತ್ತಿದ್ದಾಳೆ. ಆಕೆಯ ಮಗಳು ಶ್ರೇಯಾ ರೆಡ್ಡಿ ಅನುವಂಶೀಯ ಮೆದುಳಿನ ಪಕ್ಷವಾತ ಹಾಗೂ ಲ್ಯೂಕೇಮಿಯಾ ರೋಗದಿಂದ ಬಳಲುತ್ತಿದ್ದಾಳೆ. ಎಲುಬಿನೊಳಗಿರುವ ದೇಹ ಸಾರದ ಅಂಗಾಂಶ ಕಸಿ ಮಾಡುವ ಮೂಲಕ ಮಗುವನ್ನು ದಕ್ಕಿಸಿಕೊಳ್ಳಲು ಸಂಯೋಗಿತಾ ಪ್ರಯತ್ನಿಸುತ್ತಿದ್ದಾಳೆ. ಈ ಅಂಗಾಂಶ ಕಸಿಗಾಗಿ ಗಂಡ ಭಾರತಕ್ಕೆ ಬಂದು ದೇಹ ಸಾರವನ್ನು ನೀಡಬೇಕು. ಸಂಯೋಗಿತಾಳ ರಕ್ತದ ಗುಂಪು ಮತ್ತು ಮಗಳ ರಕ್ತದ ಗುಂಪು ಭಿನ್ನವಾಗಿರುವುದರಿಂದ ಎಲುಬಿನ ದೇಹ ಸಾರವನ್ನು ದಾನ ಮಾಡುವುದು ಆಕೆಗೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ತಂದೆಯ ಅಗತ್ಯವಿದೆ. ಅಲ್ಲದೆ ಶ್ರೇಯಾಳನ್ನು ಉಳಿಸಿಕೊಳ್ಳಬೇಕಿದ್ದರೆ ಇನ್ನೆರಡು ತಿಂಗಳಲ್ಲಿ ಈ ಆಪರೇಶನ್ ನಡೆಯಬೇಕು.
ಆಗಸ್ಟ್ 15ರೊಳಗೆ ತನ್ನ ಗಂಡನನ್ನು ಅಮೆರಿಕಾದಿಂದ ಗಡೀಪಾರು ಮಾಡಬೇಕು ಎಂಬುದು ಸಂಯೋಗಿತಾ ಬೇಡಿಕೆ. ಮಾನವೀಯ ನೆಲೆಯಲ್ಲಿ ತನ್ನ ಮಗಳಿಗೆ ತಂದೆಯ ಅಗತ್ಯ ತುಂಬಾ ಇದೆ. ಈ ನಿಟ್ಟಿನಲ್ಲಿ ಎಲ್ಲರ ಸಹಾಯವೂ ತನಗೆ ಬೇಕಾಗಿದೆ ಎಂದು ಮುಖ್ಯಮಂತ್ರಿಗೆ ಬರೆದ ಮನವಿಯಲ್ಲಿ ಸಂಯೋಗಿತಾ ಅಲವತ್ತುಕೊಂಡಿದ್ದಾಳೆ.
ಸಂಯೋಗಿತಾಳ ಗಂಡ ದಾಮಿದಿ ರೆಡ್ಡಿ 37ರ ಹರೆಯದ ಅಮೆರಿಕವಾಸಿ. ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿ ದುಡಿಯುತ್ತಿದ್ದಾನೆ. ಈತನಿಗೆ ಆಗಲೇ ಎರಡು ಮದುವೆಯಾದ್ದು, ಈ ವಿಷಯ ಮದುವೆಯ ವೇಳೆ ಸಂಯೋಗಿತಾಗೆ ತಿಳಿಯಲಿಲ್ಲ. ಹಿಂದೆಯೂ ಹಣಕ್ಕೋಸ್ಕರ ಹಾಗೂ ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಪಡೆಯಲೋಸುಗ ಎರಡು ಮದುವೆಗಳನ್ನು ಮಾಡಿಕೊಂಡು ದಾಮಿದಿ ರೆಡ್ಡಿ ಅವರಿಬ್ಬರಿಗೂ ಡೈವೋರ್ಸು ನೀಡಿದ್ದ. ಹಣಕ್ಕಾಗಿಯೇ ದಾಮಿದಿ ತನ್ನನ್ನೂ ಮದುವೆಯಾದ ಎಂಬುದು ಸಂಯೋಗಿತಾ ದೂರು. ವರ್ಷದ ಹಿಂದೆ ( ಜೂ. 19, 2002) ಆತನನ್ನು ಮದುವೆಯಾದಳು. ಆತನಿಗಾಗಿ ಸಂಯೋಗಿತಾ ಈಗಾಗಲೇ 6 ಮಿಲಿಯನ್ ರೂ. ಖರ್ಚು ಮಾಡಿದ್ದಾಳೆ.
ತಾನು ಅಮೆರಿಕಾದಲ್ಲಿ ಭಾರತೀಯ ರೆಸ್ಟೋರೆಂಟು ಸರಣಿಯ ಮಾಲಿಕ ಎಂದು ಹೇಳಿಕೊಂಡಿದ್ದ ರೆಡ್ಡಿ ಕೇವಲ ಹೋಟೆಲ ಮ್ಯಾನೇಜರ್ ಆಗಿ ಅಮೆರಿಕಾದಲ್ಲಿ ದುಡಿಯುತ್ತಿದ್ದಾನೆ ಎಂಬುದು ತಡವಾಗಿ ಬೆಳಕಿಗೆ ಬಂತು. ತನ್ನ ಉದ್ಯಮ ನಷ್ಟದ್ಲಲಿದೆ ಎಂದು ಹೇಳಿಕೊಂಡು ಸಂಯೋಗಿತಾಳಿಂದ ಸಾಕಷ್ಟು ಹಣ ಸುಲಿದ ರೆಡ್ಡಿ, ಸಂಯೋಗಿತಾಳ ಪರ್ಸು ಖಾಲಿಯಾಗುತ್ತಿದ್ದಂತೆಯೇ ಮತ್ತೆ ಅಮೆರಿಕಾಕ್ಕೆ ಹಾರಿದ.
ಫೆಬ್ರವರಿ 2003ರಲ್ಲಿ ಆಕೆಗೆ ಹೆರಿಗೆಯಾಯಿತು. ಎರಡೂವರೆ ತಿಂಗಳು ಮುಂಚಿತವಾಗಿ ಹುಟ್ಟಿದ ಮಗುವಿಗಾಗಿ ಸಂಯೋಗಿತಾ ಹೋರಾಟದ ಬದುಕು ಆರಂಭಿಸಿದ್ದಾಳೆ. ಆದರೆ ಗಂಡ ತನ್ನನ್ನು ಯಾಕೆ ಬಿಟ್ಟು ಹೋದ ಎಂಬುದು ಸಂಯೋಗಿತಾಗೆ ಪ್ರಶ್ನೆಯಾಗೇ ಉಳಿದಿತ್ತು. ‘ಅಮೆರಿಕಾಕ್ಕೆ ಫೋನಾಯಿಸಿದಾಗ ಆತ ರಜೆ ಮೇಲೆ ಭಾರತಕ್ಕೆ ಬಂದಿರುವುದಾಗಿ ತಿಳಿಯಿತು. ಆತನ ಹಳ್ಳಿ ಮನೆಗೆ ಹೋದಾಗ ಆತ ತನ್ನನ್ನೂ ಮಗುವನ್ನೂ ಒಪ್ಪಿಕೊಳ್ಳಲು ನಿರಾಕರಿಸಿದ. ಮಗುವನ್ನು ಉರಿ ಬಿಸಿಲಿನಲ್ಲಿ ಎಸೆದು ಹೋದ ಆತನಿಗೆ ಹೆಂಡತಿಯ ಕಣ್ಣೀರು, ಮಗುವಿನ ಅಳು ಯಾವುದೂ ನಾಟಲಿಲ್ಲ’ ಎಂದು ದುಷ್ಟ ಗಂಡನ ಬಗ್ಗೆ ಸಂಯೋಗಿತಾ ಹೇಳುತ್ತಾಳೆ.
ಆತನ ಪಾಸ್‌ಪೋರ್ಟ್ ನಿಷೇಧಿಸಲು ಸಂಯೋಗಿತಾ ನಡೆಸಿದ ಯತ್ನವೂ ವಿಫಲವಾಯಿತು. ಈಗ ಬೇರೆ ದಾರಿ ಕಾಣದೆ ಮಗುವನ್ನು ಉಳಿಸಿಕೊಳ್ಳಲು ಸಂಯೋಗಿತಾ ಅಮೆರಿಕನ್ ಮಹಿಳಾ ಸಂಘಟನೆಗಳ ನೆರವು ಕೋರಿದ್ದಾಳೆ. ಗಂಡನನ್ನು ವಾಪಸ್ಸು ಕರೆಸುವಂತೆ ಆಂಧ್ರ ಸರಕಾರಕ್ಕೆ ಮೊರೆಯಿಟ್ಟಿದ್ದಾಳೆ. ಆದರೂ ಸಂಯೋಗಿತಾಗೆ ಜೀವ ಬೆದರಿಕೆಯ ಕರೆಗಳೂ ಬರುತ್ತಿವೆಯಂತೆ. ಅಲ್ಲದೆ ರೋಗಿಯಾಗಿರುವ ಪುಟಾಣಿ ಶ್ರೇಯಾಳನ್ನೂ ಕೊಲ್ಲುವುದಾಗಿ ಅನಾಮಿಕ ಕರೆಗಳು ಬರುತ್ತಿವೆ.
ಸಂಯೋಗಿತಾ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾಳೆ. ಆಕೆಯ ಪುಟ್ಟ ಮಗಳು ಶ್ರೇಯಾ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಳೆ. ಈ ಹೆಣ್ಣುಮಕ್ಕಳ ಹೋರಾಟಕ್ಕೆ ಯಶಸ್ಸು ಸಿಗಲಿ.
ಮುಖಪುಟ / ವಾಟ್ಸ್ ಹಾಟ್
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications