ಚುಂಚನಗಿರಿ ಪ್ರತಿಷ್ಠಾನದಿಂದ ಗ್ರಾಮೀಣರಿಗೆ ಹೃದ್ರೋಗ ಚಿಕಿತ್ಸೆ
ಚುಂಚನಗಿರಿ ಪ್ರತಿಷ್ಠಾನದಿಂದ ಗ್ರಾಮೀಣರಿಗೆ ಹೃದ್ರೋಗ ಚಿಕಿತ್ಸೆ
ಬಿಜಿಎಸ್ ವೈವಸ್ ಹಾರ್ಟ್ ಸೆಂಟರ್ ಪ್ರಾರಂಭ
ಬೆಂಗಳೂರಿನ ಶ್ರೀನಿವಾಸ್ ಕಾರ್ಡಿಯಾಲಜಿ ಸೆಂಟರ್ ಸಹಯೋಗದೊಂದಿಗೆ ನಡೆದ ಬಿಜಿಎಸ್ ವೈವಸ್ ಹಾರ್ಟ್ ಫೌಂಡೇಶನ್‌ನ ಉದ್ಘಾಟನಾ ಸಮಾರಂಭದಲ್ಲಿ ಫೌಂಡೇಶನ್‌ನ ಅಧ್ಯಕ್ಷ ಬಾಲ ಗಂಗಾಧರನಾಥ ಸ್ವಾಮೀಜಿ ಈ ವಿಷಯವನ್ನು ತಿಳಿಸಿದರು.
ಗ್ರಾಮೀಣ ಪ್ರದೇಶದ ಬಡವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಾಗ ನಗರ ಪ್ರದೇಶಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದಕ್ಕೆ ಆರ್ಥಿಕ ತೊಂದರೆಗಳು ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಬಿಜಿಎಸ್ ಫೌಂಡೇಶನ್ ಬಡವರಿಗೆ ನೆರವಾಗಲಿದೆ ಎಂದು ಸ್ವಾಮೀಜಿ ಹೇಳಿದರು.
ಹೃದಯ ಬೇನೆ ಮಾತ್ರವಲ್ಲದೆ ಹೆದ್ದಾರಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸಲಾಗುವುದು. ಚಿಕಿತ್ಸೆ ಪಡೆಯ ಬಯಸುವವರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 223123, 223220, 9844030490.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications