ವಿಶ್ವ ಪರಂಪರೆ ಪಟ್ಟಿಗೆ ಕೊಡಗಿನ ಪಶ್ಚಿಮಘಟ್ಟ ಅರಣ್ಯ ಪ್ರದೇಶ?
ವಿಶ್ವ ಪರಂಪರೆ ಪಟ್ಟಿಗೆ ಕೊಡಗಿನ ಪಶ್ಚಿಮಘಟ್ಟ ಅರಣ್ಯ ಪ್ರದೇಶ?
ಕೊಡಗಿನ ಪರಿಸರವಾದಿಗಳೊಂದಿಗೆ ಮುಖ್ಯಮಂತ್ರಿ ಕೃಷ್ಣ ಚರ್ಚೆ
ಕೊಡಗಿನ ಅರಣ್ಯ ಪ್ರದೇಶವನ್ನು ರಕ್ಷಿಸುವುದರಿಂದ ಕಾವೇರಿ ನದಿ ಪಾತ್ರದ ರಕ್ಷಣೆಗೆ ನೆರವಾಗಲಿದ್ದು , ಈ ಕುರಿತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹೇಳಿದರು. ಸೋಮವಾರ ಕೊಡಗಿನ ಪರಿಸರವಾದಿಗಳೊಂದಿಗೆ ಚರ್ಚೆ ನಡೆಸಿದ ನಂತರ ಜೀವಶಾಸ್ತ್ರ ಹಾಗೂ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಗೋಕುಲ್ ರಾಂಗೆ ಈ ಕುರಿತು ಮುಖ್ಯಮಂತ್ರಿ ಕೃಷ್ಣ ನಿರ್ದೇಶನ ನೀಡಿದರು.
ಬ್ರಹ್ಮಗಿರಿ, ತಲಕಾವೇರಿ, ಪುಷ್ಪಗಿರಿ ಅಭಯಾರಣ್ಯಗಳನ್ನು ರಕ್ಷಿಸುವ ವಿಷಯವನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಪುಷ್ಪಗಿರಿ ಅಭಯಾರಣ್ಯದಲ್ಲಿ - ತಲಕಾವೇರಿ ಹಾಗೂ ಬ್ರಹ್ಮಗಿರಿ ಅಭಯಾರಣ್ಯದವರೆಗೆ ಪಶ್ಚಿಮಘಟ್ಟದಲ್ಲಿ ಬರುವ ರಕ್ಷಿತ ಅರಣ್ಯಗಳನ್ನು ಒಂದುಗೂಡಿಸಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸುವಂತೆ ಕೊಡಗಿನ ಪರಿಸರವಾದಿಗಳು ಸರಕಾರವನ್ನು ಆಗ್ರಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications