ಶ್ರೀನಾಥ್‌ ಗಾಯಾಳು, ನ್ಯೂಜಿಲೆಂಡ್‌ ಸರಣಿಯಲ್ಲಿ ಆಡೋಲ್ಲ

ಶ್ರೀನಾಥ್‌ ಗಾಯಾಳು, ನ್ಯೂಜಿಲೆಂಡ್‌ ಸರಣಿಯಲ್ಲಿ ಆಡೋಲ್ಲ
36 ಸಂಭವನೀಯ ಕ್ರಿಕೆಟಿಗರ ಪಟ್ಟಿ ಪ್ರಕಟ

ಮುಂಬಯಿ : ಶ್ರೀನಾಥ್‌ಗೆ ಏನೋ ತೊಂದರೆಯಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕಾರಣ ನ್ಯೂಜಿಲೆಂಡ್‌ ವಿರುದ್ಧದ ಕ್ರಿಕೆಟ್‌ ಸರಣಿಗೆ ತಮ್ಮನ್ನು ಪರಿಗಣಿಸಬೇಡಿ ಎಂದು ಆಯ್ಕೆಗಾರರಿಗೆ ಹೇಳಿದ್ದಾರೆ.

ಈ ಕಾರಣ ಮಂಗಳವಾರ (ಆ.5) ಪ್ರಕಟಿಸಲಾದ 36 ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಶ್ರೀನಾಥ್‌ ಹೆಸರನ್ನು ಪರಿಗಣಿಸಲಿಲ್ಲ. ಶ್ರೀನಾಥ್‌ಗೆ ಏನಾಗಿದೆ ಎಂಬುದನ್ನು ಮಂಡಳಿಯವರು ಹೇಳಲಿಲ್ಲ.

ಆಗಸ್ಟ್‌ 14ರಿಂದ 26ನೇ ತಾರೀಕಿನವರೆಗೆ ಸಿದ್ಧತಾ ಕ್ಯಾಂಪ್‌ ನಡೆಯಲಿದೆ. ಸೆಪ್ಟೆಂಬರ್‌ 1 ರಿಂದ 6ರವರೆಗೆ ಕ್ರಿಕೆಟ್‌ ಕ್ಯಾಂಪ್‌. ರಾಹುಲ್‌ ದ್ರಾವಿಡ್‌, ಮೊಹಮ್ಮದ್‌ ಕೈಫ್‌ ಮತ್ತು ಯುವರಾಜ್‌ ಸಿಂಗ್‌ ಇಂಗ್ಲೆಂಡಿನ ವಿವಿಧ ಕೌಂಟಿಗಳಿಗೆ ಆಡುತ್ತಿದ್ದು, ಸಿದ್ಧತಾ ಕ್ಯಾಂಪ್‌ನಲ್ಲಿ ಭಾಗವಹಿಸುವುದಿಲ್ಲ. ಆದರೆ ಸೆ.1 ರಿಂದ ಶುರುವಾಗುವ ಕ್ರಿಕೆಟ್‌ ಕ್ಯಾಂಪ್‌ಗೆ ಅವರು ಹಾಜರಾಗುವರು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಪ್ರಕಟಣೆ ತಿಳಿಸಿದೆ.

ನ್ಯೂಜಿಲೆಂಡ್‌ ಪ್ರವಾಸಕ್ಕೆ ಹೆಕ್ಕಲಾಗಿರುವ ಸಂಭವನೀಯ ಕ್ರಿಕೆಟಿಗರು-
ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಶೆವಾಗ್‌, ದಿನೇಶ್‌ ಮೊಂಗಿಯಾ, ಪಾರ್ಥಿವ್‌ ಪಟೇಲ್‌, ಜಾಹೀರ್‌ ಖಾನ್‌, ಆಶಿಶ್‌ ನೆಹ್ರಾ, ಅಜಿತ್‌ ಅಗರ್ಕರ್‌, ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌, ಸಂಜಯ್‌ ಬಂಗಾರ್‌, ಶಿವ್‌ ಸುಂದರ್‌ ದಾಸ್‌, ಗೌತಮ್‌ ಗಂಭೀರ್‌, ವಾಸಿಂ ಜಾಫರ್‌, ಸತ್ಯಜಿತ್‌ ಪರಬ್‌, ಶ್ರೀಧರನ್‌ ಶ್ರೀರಾಮ್‌, ಅಂಬಟ್ಟಿ ರಾಯುಡು, ರೋಹನ್‌ ಗವಾಸ್ಕರ್‌, ಹೇಮಾಂಗ್‌ ಬದಾನಿ, ವಿಜಯ್‌ ಬಾರದ್ವಾಜ್‌, ಮುರಳಿ ಕಾರ್ತೀಕ್‌, ಅಮಿತ್‌ ಮಿಶ್ರ, ಅಮಿತ್‌ ಭಂಡಾರಿ, ಲಕ್ಷ್ಮೀಪತಿ ಬಾಲಾಜಿ, ಅವಿಷ್ಕರ್‌ ಸಾಳ್ವಿ, ಇರ್ಫಾನ್‌ ಫಾಥನ್‌ ಜೂನಿಯರ್‌, ಮಿಥುನ್‌ ಮಿನ್ಹಾಸ್‌, ಅಜಯ್‌ ರಾತ್ರಾ, ತಿಲಕ್‌ ನಾಯುಡು, ವಿವಿಎಸ್‌ ಲಕ್ಷ್ಮಣ್‌, ಸಾಯಿರಾಜ್‌ ಬಹುತುಲೆ, ರೊಮೇಶ್‌ ಪವಾರ್‌, ಜೆ.ಪಿ. ಯಾದವ್‌, ರೀತಿಂದರ್‌ ಸಿಂಗ್‌ ಸೋಧಿ, ಶರಣ್‌ದೀಪ್‌ ಸಿಂಗ್‌ ಮತ್ತು ಸಿದ್ಧಾರ್ಥ್‌ ತ್ರಿವೇದಿ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+