ಬೆಳ್ಳಾರೆ ಗ್ರಾಮದಲ್ಲಿ ಅಂಚೆಯಣ್ಣನ ಜೊತೆ ಮೊಬೈಲ್‌ ರಿಂಗಣ

ಬೆಳ್ಳಾರೆ ಗ್ರಾಮದಲ್ಲಿ ಅಂಚೆಯಣ್ಣನ ಜೊತೆ ಮೊಬೈಲ್‌ ರಿಂಗಣ
ಮನೆ ಬಾಗಿಲಿಗೆ ದೂರವಾಣಿ ಸೇವೆ, ಸ್ಥಳದಲ್ಲೇ ಬಿಲ್‌ ಪಾವತಿ ಸೌಲಭ್ಯ

ಬೆಳ್ಳಾರೆ: ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ನಾಲ್ವರು ಪೋಸ್ಟ್‌ ಮ್ಯಾನ್‌ಗಳ ಕೈಯಲ್ಲೀಗ ಅಂಚೆ ಚೀಲದೊಂದಿಗೆ ಮೊಬೈಲ್‌ ಫೋನಿನ ರಿಂಗಣ. ಅಂಚೆಯಣ್ಣನಿಗೂ ಮೊಬೈಲ್‌ಫೋನಾ ?

ಕಣ್ಣ ಹುಬ್ಬು ಏರಿಸದಿರಿ. ಇದು ಅಂಚೆಯಣ್ಣನ ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಂಡಿರುವ ಮೊಬೈಲ್‌ ಅಲ್ಲ. ಜನರಿಗಾಗಿ ಸರ್ಕಾರ ಕೊಟ್ಟ ಮೊಬೈಲು. ಗ್ರಾಮಸ್ಥರಿಗೆ ತುರ್ತು ಸಂದರ್ಭಗಳಲ್ಲಿ ಪೋಸ್ಟ್‌ಮ್ಯಾನ್‌ ಕೈಲಿರುವ ಮೊಬೈಲ್‌ ಫೋನ್‌ ಬಳಸುವ ಹಾಗೂ ಸ್ಥಳದಲ್ಲಿಯೇ ಬಿಲ್‌ ಪಾವತಿಸುವ ಅವಕಾಶವನ್ನು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲೀಗ ಕಲ್ಪಿಸಲಾಗಿದೆ.

ಬೆಳ್ಳಾರೆಯಲ್ಲಿ 500 ಲೈನ್‌ಗಳ ಸಾಮರ್ಥ್ಯದ ಗ್ರಾಮೀಣ ಡಬ್ಲ್ಯು ಡಬ್ಲ್ಯು ಎಲ್‌ ಎಲ್‌ ಸೌಲಭ್ಯವನ್ನು ಕಳೆದ ಜುಲೈ 24ರಂದು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಟೆಲಿಕಾಂ ಜಿಲ್ಲಾ ಪ್ರಿನ್ಸಿಪಲ್‌ ಜನರಲ್‌ ಮ್ಯಾನೇಜರ್‌ ಕೆ. ಜೆ. ಚಾಕೋ ಅವರು ಗ್ರಾಮೀಣ ಸಂಚಾರ ಸೇವೆಯ ಮೊಬೈಲ್‌ ದೂರವಾಣಿ ಸೆಟ್‌ಗಳನ್ನು ಪೋಸ್ಟ್‌ಮ್ಯಾನ್‌ಗಳಿಗೆ ಹಸ್ತಾಂತರಿಸಿದರು.

ಅಂಚೆ ವಿತರಣೆ ಮಾಡುವಾಗ ಪೋಸ್ಟ್‌ ಮ್ಯಾನ್‌ ಬಳಿಯಿರುವ ಮೊಬೈಲ್‌ಗಳನ್ನು ಗ್ರಾಮಸ್ಥರು ಬಳಸಬಹುದು. ಇದರಿಂದಾಗಿ ಮೊಬೈಲ್‌ ಫೋನ್‌ ಬಳಕೆಯ ಅವಕಾಶ ಗ್ರಾಮಸ್ಥರನ್ನೂ ತಲುಪಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+