Get Updates
Get notified of breaking news, exclusive insights, and must-see stories!

ದೇವೇಗೌಡರ ದಳದಲ್ಲಿ ಸಂಯುಕ್ತ ದಳದ ಭೇಷರತ್‌ ವಿಲೀನ

ದೇವೇಗೌಡರ ದಳದಲ್ಲಿ ಸಂಯುಕ್ತ ದಳದ ಭೇಷರತ್‌ ವಿಲೀನ
ಕಾಂಗ್ರೆಸ್‌ ವಿರುದ್ಧ ಒಗ್ಗಟ್ಟು , ಆಗಸ್ಟ್‌ 16ರಂದು ಸಮಾವೇಶ

ಬೆಂಗಳೂರು : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜಾತ್ಯತೀತ ಜನತಾದಳದೊಂದಿಗೆ ಸಂಯುಕ್ತ ಜನತಾದಳ ವಿಲೀನ ಹೊಂದುವುದರೊಂದಿಗೆ ಜನತಾ ಪರಿವಾರದ ವಿಲೀನ ಪ್ರಕ್ರಿಯೆಗೆ ಚಾಲನೆ ದೊರಕಿದೆ.

ಜಾತ್ಯತೀತ ದಳದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಸ್‌.ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿ ಸಂಯುಕ್ತ ಜನತಾದಳದ ಪಿಜಿಆರ್‌ ಸಿಂಧ್ಯಾ ಹಾಗೂ ಎನ್‌.ತಿಪ್ಪಣ್ಣ ಭಾನುವಾರ ಜಾತ್ಯತೀತ ಜನತಾದಳ ಸೇರಿದರು. ಇದರೊಂದಿಗೆ ಸಂಯುಕ್ತ ಜನತಾದಳ ಭೇಷರತ್ತಾಗಿ ಜಾತ್ಯತೀತ ಜನತಾದಳದೊಂದಿದೆ ವಿಲೀನ ಹೊಂದಿತು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಸೃಷ್ಟಿಸುವ ಹಿನ್ನೆಲೆಯಲ್ಲಿ ಈ ವಿಲೀನ ಮಹತ್ವದ್ದಾಗಿದೆ. ರಾಜ್ಯದ ಕಾಂಗ್ರೆಸ್‌ ಆಡಳಿತವನ್ನು ಕೊನೆಗೊಳಿಸುವ ಏಕೈಕ ಉದ್ದೇಶದಿಂದ ಜಾತ್ಯತೀತ ಜನತಾದಳದಲ್ಲಿ ವಿಲೀನ ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಜನತಾ ಪರಿವಾರದ ಎಲ್ಲಾ ನಾಯಕರು ಒಂದಾಗುವ ಕುರಿತು ಆಶಾಭಾವನೆ ಇದೆ ಎಂದು ವಿಲೀನದ ನಂತರ ಸಿಂಧ್ಯಾ ಸುದ್ದಿಗಾರರಿಗೆ ತಿಳಿಸಿದರು.

ಜಾತ್ಯತೀತ ದಳದೊಂದಿದೆ ಸಂಯುಕ್ತ ಜನತಾದಳದ ವಿಲೀನದ ಅಂಗವಾಗಿ ಆಗಸ್ಟ್‌ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ಏರ್ಪಡಿಸುವುದಾಗಿ ಸಿಂಧ್ಯಾ ಹೇಳಿದರು.

ದೇವೇಗೌಡ ಹರ್ಷ : ಜಾತ್ಯತೀತ ಜನತಾದಳದೊಂದಿಗೆ ಸಂಯುಕ್ತ ಜನತಾದಳ ಭೇಷರತ್ತಾಗಿ ವಿಲೀನ ಹೊಂದಿರುವ ಕುರಿತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅತೀವ ಸಂತಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಅಧಿಪತ್ಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಈ ವಿಲೀನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟ ದೇವೇಗೌಡ- ಮುಂದಿನ ದಿನಗಳಲ್ಲಿ ಜನತಾ ಪರಿವಾರ ಒಗ್ಗೂಡುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+