ಬೆಂಗಳೂರಲ್ಲಿ ಯುವ ‘ಗುಂಡಮ್ಮ’ಗಳು!

ಬೆಂಗಳೂರಲ್ಲಿ ಯುವ ‘ಗುಂಡಮ್ಮ’ಗಳು!
ಪ್ರತಿಷ್ಠೆಯ ಕುಟುಕಿನಿಂದ ಶುರುವಾಗುವ ಮೊದಲ ಗುಟುಕು ಹೆಣ್ಣು ಮನಸ್ಸಿನ ಸಹಿಷ್ಣುತೆಯನ್ನೇ ಮೊಟಕಾಗಿಸುತ್ತಿದೆ. ಪಬ್‌ ಸಂಸ್ಕೃತಿ ಆವುಟ ಇವತ್ತು ‘ಗುಂಡಮ್ಮ’ಗಳ ಸಮಸ್ಯೆಯ ಭೂತವನ್ನು ಸೃಷ್ಟಿಸಿ

* ದಟ್ಸ್‌ಕನ್ನಡ ಬ್ಯೂರೋ

Bangalore Gundammasಬೆಂಗಳೂರು : ಶರ್ಮಿಷ್ಟೆ ಸಿಬಿಎಸ್ಸಿ ಪಠ್ಯದ 12ನೇ ಇಯತ್ತೆಯ ಹುಡುಗಿ. ಚೇತನ ಪುಟಿದೇಳಬೇಕಾದ ಷೋಡಶಿ. ಆದರೆ, ಅವಳ ಕಣ್ಣಲ್ಲಿ ಉತ್ಸಾಹ ಬತ್ತಿದೆ. ಓದಿನಲ್ಲಿ ಹಿಂದೇನೂ ಇಲ್ಲ. ದುಡ್ಡಿಲ್ಲ ಎಂಬ ತಲೆನೋವಿನ ಅರಿವೆ ಅವಳಿಗೆ ಆಗಿಲ್ಲ, ಆಗೋದೂ ಇಲ್ಲ. ಹಾಸಿ ಹೊದ್ದಿಕೊಳ್ಳುವಷ್ಟು ಶ್ರೀಮಂತಿಕೆ. ಹೀಗಿದ್ದೂ ಸೂರ್ಯ ಮುಳುಗುತ್ತಿದ್ದಂತೆ ಇವಳ ಮುಖಕ್ಕೆ ಮಂಕಡರುತ್ತದೆ. ಪಬ್ಬಿನ ಹಾದಿಯೀಗ ರುಟೀನು. ‘ಸ್ಮಾಲ್‌’ನಿಂದ ಶುರುವಾಗುವ ನಿತ್ಯ ಪಾರ್ಟಿ ಮುಗಿಯೋ ಹೊತ್ತಿಗೆ ಈಕೆ ಅಕ್ಷರಶಃ ‘ಗುಂಡಮ್ಮ’ನಾಗಿರುತ್ತಾಳೆ. ಕನಸು ಬೀಳೋದಿಲ್ಲ, ಹಾದಿ ಕಾಣೋದಿಲ್ಲ, ಯಾಕೆ ಹೀಗಾಗಿದ್ದಾಳೆ ಅಂತ ಕೇಳೋರಿಲ್ಲ.

ಪಬ್‌ ಸಂಸ್ಕೃತಿ ಹಾಸುಹೊಕ್ಕಾಗುತ್ತಿರುವ ಬೆಂಗಳೂರು ನಗರಿಯಲ್ಲಿ ಯುವ ಕುಡುಕಿಯರದ್ದೊಂದು ಸಮಸ್ಯೆ ಶುರುವಾಗಿದೆ. ಸಾಮಾಜಿಕ ಬದಲಾವಣೆಯ ಈ ಘಟ್ಟದಲ್ಲಿ ಹೊಸ ಹೊಸ ಸವಾಲಿಗೆ ಜವಾಬು ಕಂಡುಕೊಳ್ಳುವ ಪ್ರಾಮಾಣಿಕ ಯತ್ನ ಮಾಡುತ್ತಿರುವ ನಿಮ್ಹಾನ್ಸ್‌ ಯುವ ಕುಡುಕಿಯರದ್ದೇ ಒಂದು ಸಮೀಕ್ಷೆ ನಡೆಸಿದೆ.

ಆ ಸಮೀಕ್ಷೆ ತೆರೆದಿಡುವ ವರದಿ ಎದೆ ಝಲ್ಲೆನ್ನುವಂತಿದೆ-

  • ಬೆಂಗಳೂರಿನಲ್ಲಿ ತಂದೆ- ತಾಯಂದಿರೇ ಪಾರ್ಟಿಗಳಲ್ಲಿ ಪ್ರತಿಷ್ಠೆಯ ನೆಪವೊಡ್ಡಿ ಇನ್ನೂ ಬೆಳೆಯದ ತಮ್ಮ ಹೆಣ್ಣು ಮಕ್ಕಳ ಕೈಗೆ ಶರಾಬು ಗಲಾಸು ಕೊಡುತ್ತಿದ್ದಾರೆ.
  • ನಗರದಲ್ಲಿ ಮೊದಲ ಬಾರಿಗೆ ಹೆಂಡದ ರುಚಿ ನೋಡುವ ಹೆಣ್ಣು ಮಗಳ ಸರಾಸರಿ ವಯಸ್ಸು 16.2 ವರ್ಷ. ಶ್ರೀಮಂತ ವರ್ಗದ ಶೇ.30ರಷ್ಟು ಹೆಣ್ಣು ಮಕ್ಕಳು ಹೆಂಡದ ರುಚಿ ನೋಡಿದ್ದಾರೆ. ಮಧ್ಯಮ ವರ್ಗದ ಶೇ.9ರಷ್ಟು ಹುಡುಗಿಯರು ಕೂಡ ಪಬ್ಬು ಸಂಸ್ಕೃತಿಯ ತೆಕ್ಕೆಗೆ ಸಿಕ್ಕಿದ್ದಾರೆ.
  • ಅನೇಕ ಹುಡುಗಿಯರು 15ನೆಯ ವಯಸ್ಸಿನಲ್ಲೇ ಶರಾಬು ರುಚಿ ನೋಡುತ್ತಿದ್ದಾರೆ. ಬಹುತೇಕ ಹುಡುಗಿಯರು ಮೊದಲ ಬಾರಿ ಕುಡಿಯಲು ಅವರ ಅಪ್ಪ- ಅಮ್ಮಂದಿರೇ ಕಾರಣ.
  • ಬಂಧುಗಳ, ಸ್ನೇಹಿತರ ಪಾರ್ಟಿ ಇದಕ್ಕೆ ನೆವ. ಆದರೆ, ಮುಂದೆ ಈ ಪೈಕಿ ಕೆಲವರಿಗೆ ಕುಡಿತ ಅಂಟಿಕೊಳ್ಳುವ ಚಟವಾಗುತ್ತದೆ.
  • ಮಗಳಿಗೆ ಹೆಂಡದ ಲೋಟ ಕೊಡುವಾಗ ಮುಂದಿನ ಹತ್ತು ವರ್ಷದಲ್ಲಿ ನನ್ನ ಮಗಳು ಏನಾಗಬಹುದು ಅಂತ ಅಪ್ಪ- ಅಮ್ಮ ಯೋಚಿಸಬೇಕು.
  • ಕುಡಿತವನ್ನು ಚಟವಾಗಿ ಅಂಟಿಸಿಕೊಳ್ಳುವ ಹೆಂಗಸರು ಗರ್ಭಿಣಿಯರಾದಾಗಲೂ ಅದನ್ನು ಬಿಡಲಾಗುವುದಿಲ್ಲ. ಇದರಿಂದ ಹುಟ್ಟುವ ಮಗುವಿನ ಸ್ಥಿತಿ ಚಿಂತಾಜನಕವಾಗುತ್ತದೆ.
  • ಎಲ್ಲಕ್ಕೂ ಮುಖ್ಯವಾಗಿ ಮದ್ಯವ್ಯಸನಿ ಹುಡುಗಿಯರ ಕೌನ್ಸಿಲಿಂಗ್‌ ಸುಲಭದ ಮಾತಲ್ಲ. ಯಾವುದೇ ಸಲಹೆಗೆ ಅವರ ಮನಸ್ಸು ಓಗೊಡುವುದಿಲ್ಲ. ತೀರಾ ದಂಡಿಸಿದರೆ ಆತ್ಮಹತ್ಯೆ ಯತ್ನಕ್ಕೆ ಕೈಹಾಕುವ ಅಪಾಯವಿರುತ್ತದೆ.
  • ಇದೊಂದು ಸೂಕ್ಷ್ಮ ಸಮಸ್ಯೆಯಾಗುತ್ತಿದೆ. ಮನೋವೈದ್ಯರನ್ನೇ ಕಾಣಬೇಕಾದ್ದು ಅನಿವಾರ್ಯ.
ನಿಮ್ಹಾನ್ಸ್‌ಗಾಗಿ ನಗರದ ಬಂಜಾರ ಅಕಾಡೆಮಿ ಎಂಬ ಸರ್ಕಾರೇತರ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಕುಡಿತ ಅಂತಹ ದೊಡ್ಡ ಸಮಸ್ಯೆಯಾಗಿಲ್ಲ. ಆದರೆ ಪಬ್‌ ಸಂಸ್ಕೃತಿಯಲ್ಲಿ ಬೆಳೆಯುವ ಶ್ರೀಮಂತ ಹೆಣ್ಣು ಮಕ್ಕಳಿಂದ ಗೆಳತಿಯರಿಗೂ ಈ ಜಾಡ್ಯ ಸಣ್ಣ ಪ್ರಮಾಣದಲ್ಲಿ ಅಂಟುತ್ತಿದೆ. ಒಂಟಿತನ, ಒತ್ತಡ ಮೊದಲಾದ ನೆವ ಹೇಳಿ ಹೆಣ್ಣು ಮಕ್ಕಳು ಕುಡಿಯುತ್ತಿರುವುದು ಸಾಮಾಜಿಕ ಬೆಳವಣಿಗೆಯಲ್ಲಿ ಸಂಸ್ಕೃತಿಯ ಪತನದ ಕುರುಹು ಎಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ.

ಹುಡುಗಿಯರಲ್ಲಿ ಕುಡಿತದ ಚಟ ಎಂಬ ವಿಷಯವಾಗಿ ನಿಮ್ಹಾನ್ಸ್‌ ಇತ್ತೀಚೆಗೆ (ಜು.30) ಒಂದು ವಿಚಾರ ಸಂಕಿರಣ ನಡೆಸಿತು. ಅಲ್ಲಿ ಈ ಸಮಸ್ಯೆಯ ತೀವ್ರತೆಯು ಅಂಕಿ- ಅಂಶಗಳ ಸಮೇತ ದೊರೆಯಿತು.

Post Your Views

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+