ಮದ್ಯೋದ್ಯಮಿ ಮಲ್ಯರ ಬಾಯಲ್ಲಿ ಪಾನ ನಿರೋಧದ ಮಾತು !
ಮದ್ಯೋದ್ಯಮಿ ಮಲ್ಯರ ಬಾಯಲ್ಲಿ ಪಾನ ನಿರೋಧದ ಮಾತು !
‘ಕುಡಿಯಿರಿ ಅಂತ ಜನರಿಗೆ ನಾನು ಯಾವತ್ತೂ ಒತ್ತಾಯ ಹೇರಿಲ್ಲ’
ಜನತಾ ಪಕ್ಷದ ಪ್ರಚಾರ ಕಾರ್ಯದಲ್ಲಿ ಊರೂರು ಸುತ್ತುತ್ತಿರುವ ಮಲ್ಯ ಈಗ ಪಕ್ಕಾ ರಾಜಕಾರಣಿ. ಉದ್ದಿಮೆಯನ್ನೇ ಹಾಸು ಹೊದ್ದುಕೊಳ್ಳುವುದನ್ನು ಅವರು ಸದ್ಯಕ್ಕೆ ಬಿಟ್ಟಿರುವುದೇ ಇದಕ್ಕೆ ಸಾಕ್ಷಿ. ಸದಾ ಮಂದಹಾಸ ಬೀರುವುದು, ಕೈಮುಗಿದು ನಡೆಯುವದನ್ನು ಅಭ್ಯಾಸ ಮಾಡಿಕೊಂಡಿರುವ ಮಲ್ಯ ರಾಜಕಾರಣಿಯಾಗಿ ಚೆನ್ನಾಗಿ ಮಾತಾಡುವುದನ್ನೂ ಕಲಿತಿದ್ದಾರೆ.
ಗ್ರಾಮೀಣ ಜನರು ಕುಡಿದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರಲ್ಲ, ಇದಕ್ಕೆ ಏನು ಮಾಡಬೇಕು ಎಂದು ಗುರುವಾರ (ಜು.31) ಸುದ್ದಿಗಾರರು ಕೇಳಿದ ಅನಿರೀಕ್ಷಿತ ಪ್ರಶ್ನೆಗೆ ಮಲ್ಯ, ಪಾನ ನಿರೋಧ ಮಾಡಬೇಕು ಎಂಬ ಉತ್ತರ ಕೊಟ್ಟಾಕ್ಷಣ ಏನೇಕರು ಬೇಸ್ತು.
ಈವರೆಗೆ ಸರ್ಕಾರ ಹೆಂಡ- ಸಾರಾಯಿ ವ್ಯಾಪಾರದಿಂದ ಸಾಕಷ್ಟು ಹಣ ಸಂಪಾದಿಸಿದೆ. ಆ ಕಾರಣಕ್ಕೇ ಅದು ನಿಷೇಧ ಕುರಿತು ಯೋಚಿಸುತ್ತಿಲ್ಲ. ನಾನು ಹೆಂಡ ಕುಡಿದು ಜನ ಹಾಳಾಗಬೇಕು ಅಂತ ಬಯಸುವವನೂ ಅಲ್ಲ. ಯಾವತ್ತಿಗೂ ನಾನು ‘ಜವಾಬ್ದಾರಿಯುತ ಕುಡಿತ’ದ ಸಲಹೆ ಕೊಟ್ಟವನು. ಆದರೆ, ಅದರಿಂದ ಬದುಕನ್ನು ಹಾಳು ಮಾಡಿಕೊಳ್ಳಿ ಅಂತ ಖಂಡಿತ ಹೇಳಿಲ್ಲ. ಕುಡಿಯಿರಿ ಅಂತ ಜನಕ್ಕೆ ನಾನು ಯಾವತ್ತೂ ಅಪ್ಪಣೆ ಕೊಡಿಸಿಲ್ಲ. ಸರ್ಕಾರ ಏನಾದರೂ ಹೆಂಡ ತಯಾರಿಸಬೇಡಿ ಅಂತ ಅಪ್ಪಣೆ ಕೊಟ್ಟರೆ ನನ್ನ ಮದ್ಯೋದ್ಯಮವನ್ನು ನಾನು ನಿಲ್ಲಿಸಲು ತಯಾರು ಎಂದು ಮಲ್ಯ ಹೇಳಿದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ
ಬಾಲಿವುಡ್‌ನಲ್ಲಿ ವಿಜಯ್‌ಮಲ್ಯ ರೇಸು
ಮುಖಪುಟ / ವಾರ್ತೆಗಳು












Click it and Unblock the Notifications