ನೀರು ಕೊಯ್ಲು ಮಾಡಿ : ದಕ್ಷಿಣದ ರಾಜ್ಯಗಳಿಗೆ ಕೇಂದ್ರದ ಸಲಹೆ

ನೀರು ಕೊಯ್ಲು ಮಾಡಿ : ದಕ್ಷಿಣದ ರಾಜ್ಯಗಳಿಗೆ ಕೇಂದ್ರದ ಸಲಹೆ
ಚೆನ್ನೈನ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ನೀರು ಕೊಯ್ಲು ಕಡ್ಡಾಯ

ನವ ದೆಹಲಿ : ಮಳೆ ನೀರು ಕೊಯ್ಲು ತಂತ್ರಜ್ಞಾನವನ್ನು ದಕ್ಷಿಣದ ರಾಜ್ಯಗಳು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರಸರ್ಕಾರ ಜುಲೈ 29ರ ಮಂಗಳವಾರ ಅಭಿಪ್ರಾಯಪಟ್ಟಿತು.

ಚೆನ್ನೈ ಮಹಾನಗರದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ನೀರು ಕೊಯ್ಲು ತಂತ್ರಜ್ಞಾನದ ಅನುಷ್ಠಾನವನ್ನು ತಮಿಳು ನಾಡು ಸರ್ಕಾರ ಕಡ್ಡಾಯಗೊಳಿಸಿದೆ. ಇದೊಂದು ಸ್ವಾಗತಾರ್ಹ ನಿಲುವಾಗಿದ್ದು , ಎಲ್ಲಾ ರಾಜ್ಯಗಳೂ- ವಿಶೇಷವಾಗಿ ದಕ್ಷಿಣದ ರಾಜ್ಯಗಳು ನೀರು ಕೊಯ್ಲು ಮಾಡಬೇಕೆಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಸಿ.ಪಿ. ಠಾಕೂರ್‌ ಮಂಗಳವಾರ ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.

ದೆಹಲಿ ಸರ್ಕಾರ ಕೂಡ ನೀರು ಕೊಯ್ಲಿನ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಎಲ್ಲಾ ಮಹಾ ನಗರಗಳಿಗೂ ನೀರು ಕೊಯ್ಲು ಅನಿವಾರ್ಯವಾಗಿದೆ ಎಂದು ಸಚಿವ ಠಾಕೂರ್‌ ಅಭಿಪ್ರಾಯಪಟ್ಟರು.

ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ತೀವ್ರ ಬರ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ನೀರು ಕೊಯ್ಲಿನ ಮಹತ್ವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಕೃಷ್ಣ ಕೂಡ ಬೆಂಗಳೂರಿನ ಪ್ರಮುಖ ಕಟ್ಟಡಗಳು ನೀರು ಕೊಯ್ಲು ಮಾಡುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+