ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಇಂದಿನ ಆರ್ಥಿಕ ಪರಿಸ್ಥಿತಿ : ರಾಜೀವ್‌ ದೀಕ್ಷಿತ್‌ ಅಂಕಿ- ಅಂಶ

By Staff
|
Google Oneindia Kannada News

ಭಾರತದ ಇಂದಿನ ಆರ್ಥಿಕ ಪರಿಸ್ಥಿತಿ : ರಾಜೀವ್‌ ದೀಕ್ಷಿತ್‌ ಅಂಕಿ- ಅಂಶ

  • ನಮಗೆ ಸ್ವಾತಂತ್ರ್ಯಬಂದಾಗ ನಮ್ಮದು ಸಾಲ ಮುಕ್ತ ದೇಶವಾಗಿತ್ತು.
  • 2003ರಲ್ಲಿ 28 ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಮಾಡಿರುವ ಸಾಲ ಮತ್ತು ಅದರ ಮೇಲಿನ ಬಡ್ಡಿ 18 ಲಕ್ಷ ಕೋಟಿ ರೂಪಾಯಿ.
  • ಒಬ್ಬ ಭಾರತೀಯನ ಮೇಲೆ ಇಂದು 18,000 ರೂಪಾಯಿ ಸಾಲವಿದೆ. ಒಂದು ಸಂಸಾರದ ಮೇಲೆ ಸುಮಾರು 90,000 ರೂಪಾಯಿ ಸಾಲವಿದೆ.
  • ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡ್‌ ದೇಶ ನಮಗೆ 1,000 ಕೋಟಿ ರೂಪಾಯಿ ದಂಡ ಕೊಡಬೇಕಿತ್ತು. ಅದು ಇಲ್ಲಿಯವರೆಗೆ ದೊರೆತಿಲ್ಲ.
  • ಇದುವರೆಗೂ ಸಾಲರಹಿತ ಸರ್ಕಾರ ನಡೆಸಿದವರು ಲಾಲ್‌ ಬಹದ್ದೂರ್‌ ಶಾಸ್ತ್ರಿ ಮತ್ತು ಮೊರಾರ್ಜಿ ದೇಸಾಯಿ.
  • ನಾವು ಉಪಯೋಗಿಸದೆ ಹಾಳಾಗುತ್ತಿರುವ ಗೋಧಿ ಸುಮಾರು 2 ಕೋಟಿ ಟನ್ನುಗಳು.
  • ಭಾರತ ಸರ್ಕಾರದ ವಾರ್ಷಿಕ ಆದಾಯ 2.5 ಲಕ್ಷ ಕೋಟಿಗಳಾದರೆ, 4 ಲಕ್ಷ ಕೋಟಿ ಖರ್ಚು.
  • 4 ಲಕ್ಷ ಕೋಟಿ ರೂಪಾಯಿಗಳಲ್ಲಿ 1.2 ಲಕ್ಷ ಕೋಟಿ ಬಡ್ಡಿ ಕಟ್ಟಲು ಉಪಯೋಗಿಸಿದರೆ, 70 ಸಾವಿರ ಕೋಟಿ ರೂಪಾಯಿ ನಮ್ಮ ರಾಜಕಾರಣಿಗಳ ಭತ್ಯೆಗೆ ಮತ್ತು 10 ಸಾವಿರ ಕೋಟಿ ನಮ್ಮ ಅಧಿಕಾರಿಗಳಿಗೆ ಸಂಬಳ, ಸಾರಿಗೆ ಭತ್ಯೆಗಳಿಗೆ ವಿನಿಯೋಗವಾಗುತ್ತಿದೆ. ಸುಮಾರು 60 ಸಾವಿರ ಕೋಟಿ ರೂಪಾಯಿ ನಮ್ಮ ರಕ್ಷಣಾ ವ್ಯವಸ್ಥೆಗೆ ಖರ್ಚಾದರೆ, ಭಾರತ ಸರ್ಕಾರದ ಗರೀಬೀ ಹಠಾವೋ ಯೋಜನೆಗೆ 40 ಸಾವಿರ ಕೋಟಿ ಖರ್ಚಾಗುತ್ತದೆ. ಮತ್ತು 1 ಸಾವಿರ ಕೋಟಿ ರೂಪಾಯಿ ಇತರೆ ಕೆಲಸಗಳಿಗೆ ಖರ್ಚಾಗುತ್ತದೆ.
  • 1952ರಿಂದ 2003ರವರೆಗೆ ನಾವು ಗರೀಬೀ ಹಠಾವೋ ಯೋಜನೆ ಅಡಿಯಲ್ಲಿ ಖರ್ಚಾದ ಹಣ ನೇರವಾಗಿ ಬಡವರಿಗೆ ಕೊಟ್ಟಿದ್ದರೆ 10 ವರ್ಷಗಳಲ್ಲಿ ಬಡತನ ನಿರ್ಮೂಲನೆಯಾಗುತ್ತಿತ್ತು.
  • 4 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇಕಡ 10% ಹಣ ಮಾತ್ರ ಜನರಿಗೆ ಅತ್ಯಮೂಲ್ಯವಾದ ನೀರು, ಔಷಧಿ, ವಿದ್ಯೆ ಮುಂತಾದವುಗಳಿಗೆ ಖರ್ಚಾಗುತ್ತದೆ.
  • ಒಂದು ದಿವಸಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ವೆಚ್ಚವಾಗುವುದು 1800 ಕೋಟಿಗಳಾದರೆ, ವಿದ್ಯಾಭ್ಯಾಸಕ್ಕೆ 20 ರೂಪಾಯಿ, ಆರೋಗ್ಯ 18 ರೂಪಾಯಿ, ನೀರು ಸರಬರಾಜಿ 10 ರೂಪಾಯಿ ವೆಚ್ಚವಾಗುತ್ತದೆ.
  • ರಾಜಕಾರಣಿಗಳ ಮತ್ತು ಅಧಿಕಾರಿಗಳ 50% ಸಂಬಳ ಮತ್ತು ಇತರೆ ಭತ್ಯೆಗಳ ಕಡಿತವಾದರೆ ವಾರ್ಷಿಕ 40 ಸಾವಿರ ಕೋಟಿ ಆದಾಯವಿದೆ.
  • ನಮ್ಮ ದೇಶದಲ್ಲಿ ವಾರ್ಷಿಕ 90 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಯುತ್ತದೆ.
  • ಭಾರತಕ್ಕೆ ಸ್ವಾತಂತ್ರ ಬಂದ ದಿನ 1 ಡಾಲರ್‌ನ ಸಮನಾಗಿ 1 ರೂಪಾಯಿಯಿತ್ತು. ಆದರೆ ಇಂದು 1 ಡಾಲರ್‌ನ ಬೆಲೆ 48 ರೂಪಾಯಿಯಾಗಿದೆ.
  • ಇದುವರೆಗೆ ತಮಿಳುನಾಡು ಒಂದರಲ್ಲೇ, ಸುಮಾರು 3.5 ಲಕ್ಷ ಮಗ್ಗಗಳು ಮುಚ್ಚಿವೆ. ಇನ್ನೂ 13 ಲಕ್ಷಗಳು ಮುಚ್ಚುವ ಹಂತದಲ್ಲಿದೆ.
  • 1991ರಿಂದ ಭಾರತದಲ್ಲಿ 4 ಲಕ್ಷ 64 ಸಾವಿರ ಚಿಕ್ಕ ಕೈಗಾರಿಕಾ ಕಾರ್ಖಾನೆಗಳು ಮುಚ್ಚಿವೆ.
  • ಭಾರತದ ರಾಜಕಾರಣಿಗಳ ಮತ್ತು ಇತರೆ ಅಧಿಕಾರಿಗಳ ಸುಮಾರು 48 ಲಕ್ಷ ಕೋಟಿ ರೂಪಾಯಿ ಹಣ ಸ್ವಿಸ್‌ ಬ್ಯಾಂಕ್‌ನಲ್ಲಿ ಕೊಳೆಯುತ್ತಿದೆ.
  • ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ, ಬ್ರಿಟಿಷರು ಬಿಟ್ಟು ಹೋದ ಸುಮಾರು 34 ಸಾವಿರ ಶಾಸನ ಹಾಗೆಯೇ ಇವೆ.
ಬೆಂಗಳೂರಲ್ಲಿ ರಾಜೀವ್‌ ದೀಕ್ಷಿತ್‌

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X