ಬೆಂಗಳೂರಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 50 ಅಲ್ಲ , 2000 !

ಬೆಂಗಳೂರಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 50 ಅಲ್ಲ , 2000 !
ಇದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳ ಅಂದಾಜು

ಬೆಂಗಳೂರು : ನಗರದಲ್ಲಿ ಡೆಂಗ್ಯೂ ಜ್ವರ ಪೀಡಿತರ ನಿಖರ ಸಂಖ್ಯೆ ಎಷ್ಟು ? ಕೇವಲ 50 ಅಂತ ಇತ್ತೀಚೆಗೆ ವರದಿಯಾಂದು ಬಂದಿತ್ತು. ಆದರೆ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಹಾಡುತ್ತಿರುವ ಹೊಸ ರಾಗ ಆತಂಕ ಹುಟ್ಟಿಸುತ್ತದೆ- ಒಟ್ಟು 2 ಸಾವಿರಕ್ಕೂ ಹೆಚ್ಚು ಬೆಂಗಳೂರಿಗರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ !

ಮಹಾನಗರ ಪಾಲಿಕೆ ಆಯುಕ್ತ ಎಂ.ಆರ್‌.ಶ್ರೀನಿವಾಸ ಮೂರ್ತಿ ನಾಲ್ಕು ದಿನಗಳ ಹಿಂದೆ ಮಾಧ್ಯಮಗಳಿಗೆ ಡೆಂಗ್ಯೂ ಪೀಡಿತರ ಬಗ್ಗೆ ಮಾಹಿತಿ ಕೊಡುವಾಗ, ಈ ಸಂಖ್ಯೆ ಇನ್ನು ಕೆಲವು ದಿನಗಳಲ್ಲಿ ಗಣನೀಯವಾಗಿ ಹೆಚ್ಚಲಿದೆ ಎಂದು ಹೇಳಿದ್ದರು. ‘ಸೆಂಟರ್‌ ಫಾರ್‌ ರಿಸರ್ಚ್‌ ಇನ್‌ ಮೆಡಿಕಲ್‌ ಎಂಟಮಾಲಜಿ’ ಈಗಾಗಲೇ ಡೆಂಗ್ಯೂ ಪೀಡಿತರಾಗಿರುವ 50 ಮಂದಿಯನ್ನು ಪರೀಕ್ಷಿಸಿ, ಸಮಗ್ರ ವರದಿ ಕೊಡುತ್ತದೆ. ಈವರೆಗೆ ಕೇವಲ 30 ಜನರ ವರದಿ ಹೊರಬಿದ್ದಿದೆ. ಮಿಕ್ಕ 20 ಮಂದಿಯ ಅನಾರೋಗ್ಯದ ಕುರಿತು ವರದಿ ಹೊರಬಿದ್ದು, ಡೆಂಗ್ಯೂ ನಿಯಂತ್ರಣ ಕ್ರಮ ತೆಗೆದುಕೊಳ್ಳುವಷ್ಟರಲ್ಲಿ ಇನ್ನೆಷ್ಟು ಮಂದಿ ರೋಗಕ್ಕೆ ಸಿಕ್ಕಿರುತ್ತಾರೋ?

ಮಹಾನಗರ ಪಾಲಿಕೆ ಮಾಧ್ಯಮಗಳಿಗೆ ಕೊಡುವ ಡೆಂಗ್ಯೂ ವರದಿ ಕೇವಲ ಮುಖ್ಯ ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿರುತ್ತದೆ. ಆದರೆ, ಉಪ ಕ್ಲಿನಿಕ್‌ಗಳು ಮತ್ತಿತರ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಡೆಂಗ್ಯೂ ಪ್ರಕರಣಗಳ ಬಗ್ಗೆ ಪಾಲಿಕೆ ಗಮನ ಹರಿಸಿರುವುದಿಲ್ಲ. ಈ ಬಗ್ಗೆ ಆರೋಗ್ಯಾಧಿಕಾರಿಗಳಲ್ಲೇ ಗೊಂದಲವಿರುವುದು ಸ್ಪಷ್ಟವಾಗಿದೆ.

ಈ ಗೊಂದಲ ಹೋಗಲಾಡಿಸಿ, ಡೆಂಗ್ಯೂ ಮಾರಿಯಿಂದ ನಾಗರಿಕರು ಬಚಾವಾಗುವಂತೆ ಮಾಡುವುದು ಹೇಗೆ? ಇದರ ಬಗ್ಗೆ ಚರ್ಚಿಸಲೆಂದೇ ಬುಧವಾರ (ಜು.16) ನಗರದ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಸಭೆ ಸೇರಲಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ರಾಜ್ಯದಲ್ಲಿ ಡೆಂಗ್ಯೂ : 192 ಮಂದಿಗೆ ಸೋಂಕು, ಇಬ್ಬರ ಸಾವು
ಹನಿ ಮಳೆಗೇ ಬೆಂಗಳೂರಿಗೆ ಬಂತು ಡೆಂಗ್ಯೂ ಮಹಾಮಾರಿ

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+