ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತರಿಸಿಕೊಳ್ಳುತ್ತಿರುವ ನೂರ್‌, ಕೊನೆಯುಸಿರೆಳದ ಬಾಬರ್‌

By Staff
|
Google Oneindia Kannada News

ಚೇತರಿಸಿಕೊಳ್ಳುತ್ತಿರುವ ನೂರ್‌, ಕೊನೆಯುಸಿರೆಳದ ಬಾಬರ್‌
ನಾರಾಯಣ ಹೃದಯಾಲಯದಲ್ಲಿ ಬದುಕು- ಸಾವಿನ ನೋಟ

ಬೆಂಗಳೂರು : ಪಾಕಿಸ್ತಾನದ ಪುಟಾಣಿ ನೂರ್‌ ಫಾತೀಮಾ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾದದ್ದಕ್ಕೆ ಬೊಕೆಗಳು ಬಂದು ಆಸ್ಪತ್ರೆಯ ಅಂಗಳ ತುಂಬುತ್ತಿರುವ ಸಮಯದಲ್ಲೇ, ಕರಾಚಿಯ ಇನ್ನೊಂದು 6ತಿಂಗಳ ಕಂದಮ್ಮ ಇವತ್ತು (ಜು.16) ಇದೇ ಆಸ್ಪತ್ರೆಯಲ್ಲಿ ಹೆಣವಾಗಿ ಹೊರಕ್ಕೆ ಹೋಯಿತು. ಸೋಮವಾರ (ಜು.14) ಮಧ್ಯರಾತ್ರಿಯೇ ಈ ಮಗು ಕೊನೆಯುಸಿರೆಳೆದಿತ್ತು.

ಸತ್ತ ನತದೃಷ್ಟ ಮಗುವಿನ ಹೆಸರು ಬಾಬರ್‌. ದುಬೈ ಮಾರ್ಗವಾಗಿ ಬೆಂಗಳೂರಿಗೆ ಬಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಈ ಮಗು ನಾರಾಯಣ ಹೃದಯಾಲಯಕ್ಕೆ ಫಾತೀಮಾಗಿಂತಲೂ ಮುಂಚೆ ಸೇರಿತ್ತು. ಕಳೆದ ಬುಧವಾರದಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ದೆಹಲಿ- ಲಾಹೋರ್‌ ಬಸ್ಸು ವ್ಯವಸ್ಥೆ ಶುರುವಾಗುವ ಮುಂಚೆಯೇ ಬಾಬರ್‌ ತಂದೆ- ತಾಯಿ ಮಗುವನ್ನು ಬೆಂಗಳೂರಿಗೆ ಕರೆ ತರಬೇಕಾದ್ದರಿಂದ, ಅವರು ದುಬೈ ಮಾರ್ಗವಾಗಿ ಬರಬೇಕಾಯಿತು.

ಸೋಮವಾರ (ಜು.14) ಶಸ್ತ್ರಚಿಕಿತ್ಸೆಗೊಳಗಾಗಿದ್ದ ಬಾಬರ್‌ ತೀವ್ರ ನಿಶ್ಯಕ್ತಿಯಿಂದ ಕೊನೆಯುಸಿರೆಳೆದ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು. ಬುಧವಾರ ತೀವ್ರ ನಿಗಾ ಘಟಕದಲ್ಲಿ ಫಾತಿಮಾ ಚೇತರಿಸಿಕೊಳ್ಳುತ್ತಿದ್ದರೆ, ಬಾಬರ್‌ ಹೆಣವಾಗಿ ಹೊರಹೋದ. ಅತಿ ದೀರ್ಘ ಪ್ರಯಾಣದ ಆಯಾಸವೇ ಬಾಬರ್‌ನ ನಿಶ್ಯಕ್ತಿಗೆ ಕಾರಣ ಎಂದು ನಾರಾಯಣ ಹೃದಯಾಲಯದ ವೈದ್ಯರು ಹೇಳಿದ್ದಾರೆ.

ದೆಹಲಿ- ಲಾಹೋರ್‌ ಬಸ್ಸು ಆರಂಭವಾಗುವುದಕ್ಕೆ ಮುಂಚೆಯೇ ಪಾಕಿಸ್ತಾನದಿಂದ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸುವುದು ಸಾಮಾನ್ಯವಾಗಿತ್ತು. ಅವರೆಲ್ಲರೂ ಕರಾಚಿ-ದುಬೈ ಮಾರ್ಗವಾಗಿ ಬೆಂಗಳೂರು ತಲುಪುತ್ತಿದ್ದರು.

ಪಾಕ್‌ ಮತ್ತು ಭಾರತದ ನಡುವೆ ಮತ್ತೆ ಶುರುವಾದ ಬಸ್‌ ಸಂಚಾರದ ಮಾನವೀಯ ಸಂಬಂಧದ ಹೃದಯ ಸ್ಪರ್ಶಿ ಉದಾಹರಣೆಯಾಗಿ ಫಾತಿಮಾ ಶಸ್ತ್ರಚಿಕಿತ್ಸೆ ಗಮನ ಸೆಳೆಯಿತು. ಫಾತಿಮಾಗಿಂತ ವಯಸ್ಸಲ್ಲೂ ಚಿಕ್ಕವನಾದ ಬಾಬರ್‌ ಆಸ್ಪತ್ರೆಯಲ್ಲಿ ಫಾತಿಮಾಗೆ ಬೊಕೆ ತಂದವರ ಕಣ್ಣಿಗೆ ಬಿದ್ದದ್ದು ಹೆಣವಾದ ನಂತರವೇ !

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X