ಪುನರೂರು ಅಧ್ಯಕ್ಷಗಿರಿಗೆ ಎರಡು ವರ್ಷ

ಪುನರೂರು ಅಧ್ಯಕ್ಷಗಿರಿಗೆ ಎರಡು ವರ್ಷ
ಕನ್ನಡ ಸಾಹಿತ್ಯ ಪರಿಷತ್‌ ಎದುರಿನಲ್ಲಿ ಹೊಸ ಯೋಜನೆಗಳು ಸಾಲು ಸಾಲು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು ಎರಡು ವರ್ಷಗಳನ್ನು ಪೂರೈಸುತ್ತಿರುವ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರು ಸಾಹಿತ್ಯ ಪರಿಷತ್‌ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಸರಕಾರದ ಅನುದಾನದೊಂದಿಗೆ 100 ಗ್ರಂಥಗಳ ಪ್ರಕಟಣೆ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಮಾಲಿಕೆಯಲ್ಲಿ 50 ಹಳೆಗನ್ನಡ ಗ್ರಂಥ ಕಾವ್ಯಗಳು, 50 ಶಾಸ್ತ್ರ ಗ್ರಂಥಗಳನ್ನು ಪ್ರಕಟಿಸಲಾಗುವುದು. ಇದಲ್ಲದೆಯೇ 100 ಉತ್ತಮ ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದು ಹರಿಕೃಷ್ಣ ಪುನರೂರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಸಾಪ ಮುಂದಿರುವ ಯೋಜನೆಗಳು :

  • ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷನ್ಮಂದಿರದ ನವೀಕರಣದ ಬದಲು ನವ ಕಟ್ಟಡದ ನಿರ್ಮಾಣ.
  • ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ ನಿರ್ಮಾಣ.
  • ಅಮೂಲ್ಯ ಗ್ರಂಥಗಳನ್ನು ಸಿ.ಡಿ.ಗೆ ಅಳವಡಿಸುವುದು.
  • ಪರಿಷ್ಕೃತ ಕನ್ನಡ- ಕನ್ನಡ- ಇಂಗ್ಲಿಷ್‌ ನಿಘಂಟು ರಚನೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+