ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಂಕೇತಿ ನಿಬಂಧಗಳು’ ಮಾಹಿತಿ ಕೋರಿಕೆ

By Staff
|
Google Oneindia Kannada News

‘ಸಂಕೇತಿ ನಿಬಂಧಗಳು’ ಮಾಹಿತಿ ಕೋರಿಕೆ
ಸಂಕೇತಿ ಅಧ್ಯಯನ ಪ್ರಕಟಣ ಸಮಿತಿ, ಸಮುದಾಯ ಅಧ್ಯಯನ ಕೇಂದ್ರ, ಮೈಸೂರು ಇವರು ನಡೆಸುತ್ತಿರುವ ಅಧ್ಯಯನಕ್ಕೆ ಸಂಕೇತಿ ಸಮುದಾಯದವರು ಮಾಹಿತಿ ಒದಗಿಸಬಹುದು.

ಮೈಸೂರಿನ ‘ಸಮುದಾಯ ಅಧ್ಯಯನ ಕೇಂದ್ರ’ವು ವಿಶ್ವದಾದ್ಯಂತ ಇರುವ ಸಂಕೇತಿ ಸಮುದಾಯದ ಬಗೆಗೆ ಸ್ಥೂಲವಾಗಿ ಅಧ್ಯಯನ ಮಾಡಿ, ಇಪ್ಪತ್ತೈದು (25) ಮಹಾ ಸಂಪುಟಗಳಿಗಾಗುವಷ್ಟು ಮಾಹಿತಿ ಸಂಗ್ರಹಿಸುವ ನೀಲನಕ್ಷೆಯನ್ನು ತಯಾರಿಸಿದೆ.

‘ಸಂಕೇತಿ ನಿಬಂಧಗಳು’ ಎಂಬ ಶೀರ್ಷಿಕೆಯ ಸಂಪುಟವನ್ನು ಸಂಪಾದಿಸುವ ಜವಾಬ್ದಾರಿಯನ್ನು ಡಾ. ಬಿ.ವಿ. ಸುಧಾಮಣಿ ಅವರು ನಿರ್ವಹಿಸುತ್ತಿದ್ದು - ಈ ಸಂಪುಟ ಸೆಪ್ಟೆಂಬರ್‌ 2003 ರೊಳಗೆ ಪ್ರಕಟಣೆಗೆ ಸಿದ್ಧವಾಗಬೇಕಿದೆ. ಸುಧಾಮಣಿ ಅವರಿಗೆ ‘ಸಂಕೇತಿ ನಿಬಂಧಗಳು’ ಸಂಪುಟವನ್ನು ಸಿದ್ಧಪಡಿಸುವಲ್ಲಿ ಸಂಕೇತಿಗಳಿಂದ ಕೆಲವು ಮಾಹಿತಿಗಳು ಬೇಕಾಗಿದೆ.

ಸುಧಾಮಣಿ ಅವರು ನಿರೀಕ್ಷಿಸುತ್ತಿರುವ ವಿವರಗಳು :

ಎಂ.ಫಿಲ್‌ ಹಾಗೂ ಪಿಎಚ್‌. ಡಿ ಮಾಡಿರುವ ಸಂಕೇತಿಗಳು ತಮ್ಮ ಪ್ರಬಂಧದ ಸಾರಾಂಶ, ಒಂದು ಭಾವಚಿತ್ರ (ಪಾಸ್‌ ಪೋರ್ಟ್‌ ಸೈಜ್‌), ವಂಶವೃಕ್ಷ, ವ್ಯಕ್ತಿವಿವರಗಳನ್ನೊಳಗೊಂಡ ಸುಮಾರು ಐದು (5) ಪುಟಗಳ ವಿವರಣೆಯನ್ನು ಕಳುಹಿಸಿಕೊಡಬೇಕು. ಈ ವಿವರಣೆಗಳು ಕನ್ನಡ ಅಥವ ಆಂಗ್ಲ ಭಾಷೆಯಲ್ಲಿರಬಹುದು.

ಸಂಕೇತಿಗಳ ಸಂಶೋಧನಾ ಸಂಪ್ರಬಂಧ ಮುದ್ರಿತವಾಗಿದ್ದಲ್ಲಿ, ದಯವಿಟ್ಟು ಮೇಲೆ ಹೇಳಿರುವ ವಿವರಗಳೊಂದಿಗೆ, ಮುದ್ರಿತ ಪ್ರತಿಯಾಂದನ್ನು (ಏರ್‌-ಮೇಲ್‌ ನಲ್ಲಾಗಲೀ, ಸೀ-ಮೇಲ್‌ ನಲ್ಲಾಗಲಿ) ಕಳುಹಿಸಲು ಮನವಿ. ಜುಲೈ 20, 2003 ರೊಳಗೆ ಸಂಪ್ರಬಂಧದ ವಿವರಗಳನ್ನು ಕಳುಹಿಸಿಕೊಡಲು ಸಂಪಾದಕರು ಕೋರಿದ್ದಾರೆ.

ವಿವರಗಳನ್ನು ಕಳುಹಿಸಿಕೊಡಬೇಕಾದ ವಿಳಾಸ :

ಡಾ। ಸುಧಾಮಣಿ ಬಿ.ವಿ.
(ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಮಹಾರಾಣಿ ಮಹಿಳಾ ಕಾಲೇಜು, ಮೈಸೂರು)
ನಂ. 299, ‘ಕಮಲ ಜ್ಯೋತಿ’, 12ನೇ ಅಡ್ಡ ರಸ್ತೆ,
ವಿಜಯನಗರ ರೈಲ್ವೆ ಕಾಲೋನಿ,
ಮೈಸೂರು- 570 016, ಕರ್ನಾಟಕ, ಭಾರತ.
ದೂರವಾಣಿ ಸಂಖ್ಯೆ (ಅಮೆರಿಕಾದಿಂದ): 011-91-821- 2301965
ವಿ-ಅಂಚೆ: [email protected]

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X