ಉರುಳಿದ ಗೋಲ್ಕಂಡಾ ಎಕ್ಸ್‌ಪ್ರೆಸ್ ರೈಲು ; 28 ಮಂದಿ ಸಾವು?
ಉರುಳಿದ ಗೋಲ್ಕಂಡಾ ಎಕ್ಸ್‌ಪ್ರೆಸ್ ರೈಲು ; 28 ಮಂದಿ ಸಾವು?
ಕೈಕೊಟ್ಟ ಬ್ರೇಕು, ಸೇತುವೆಯಿಂದ ಉರುಳಿಬಿದ್ದ ರೈಲು
ಗೋಲ್ಕಂಡಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಾಗೂ ಬೋಗಿ ಸೇತುವೆಯಿಂದ ಉರುಳಿಬಿದ್ದು ಅಪಘಾತ ಸಂಭವಿಸಿದೆ. ಸೇತುವೆಯಡಿ ಹೋಗುತ್ತಿದ್ದ ಆಟೊರಿಕ್ಷಾ ಹಾಗೂ ಎಂಟು ಮಂದಿ ಮೀನು ಮಾರಾಟಗಾರರ ಮೇಲೆ ರೈಲಿನ ಬೋಗಿಗಳು ಬಿದ್ದು ಅವರು ಸಾವಿಗೀಡಾಗಿದ್ದಾರೆ.
ಮೊದಲ ಬೋಗಿಯಲ್ಲಿದ್ದ ಹತ್ತು ಮಂದಿ ಮೃತರಾಗಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆ ಗುಂಟೂರು ನಿಲ್ದಾಣವನ್ನು ಬಿಟ್ಟ ಸ್ವಲ್ಪ ಸಮಯದಲ್ಲಿಯೇ ರೈಲಿನ ಬ್ರೇಕು ಹಾಳಾಗಿರುವ ವಿಷಯ ಚಾಲಕನ ಗಮನಕ್ಕೆ ಬಂದಿದ್ದು , ಆತ ವಿಷಯವನ್ನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಆದರೆ ರೈಲು ವರಂಗಲ್ ಬಳಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದು ಅಪಘಾತಕ್ಕೆ ಕಾರಣವಾಗಿದೆ. ರೈಲಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾನೆ.
ಸಹಾಯವಾಣಿ, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 040-27786970, 040-27704056
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications