ಎಸ್ಸೆಂ.ಕೃಷ್ಣರ ದುರಾಡಳಿತ ವಿರುದ್ಧ ಮಾದೇಗೌಡರ ಕಾವೇರಿ ಸೈನ್ಯ
ಎಸ್ಸೆಂ.ಕೃಷ್ಣರ ದುರಾಡಳಿತ ವಿರುದ್ಧ ಮಾದೇಗೌಡರ ಕಾವೇರಿ ಸೈನ್ಯ
ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಪಕ್ಷ ಸ್ಥಾಪಿಸಲು ಮಾದೇಗೌಡರ ಆಸಕ್ತಿ
ಎಸ್ಸೆಂ. ಕೃಷ್ಣ ಸರಕಾರದ ದುರಾಡಳಿತ ಹೀಗೇ ಮುಂದುವರೆದಲ್ಲಿ ರಾಜಕೀಯ ಪಕ್ಷ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾದೇಗೌಡರು ತಿಳಿಸಿದರು.
‘ಕಾವೇರಿ ಸೈನ್ಯ’ ಪಕ್ಷ ನಿರ್ಮಾಣವಾದಲ್ಲಿ ಜಿಲ್ಲೆಯ ಎಲ್ಲ 9 ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಪ್ರಾಮಾಣಿಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಆ ಮೂಲಕ ಜಿಲ್ಲೆಯ ಜನತೆಯನ್ನು ಪರೀಕ್ಷಿಸಲಾಗುವುದು ಎಂದು ಮಾದೇಗೌಡ ಹೇಳಿದರು.
ರಾಜ್ಯದಲ್ಲಿ ಈ ಬಾರಿ ಕಂಡು ಬಂದ ಬರಗಾಲಕ್ಕೆ ಮುಖ್ಯಮಂತ್ರಿ ಕೃಷ್ಣ ಅವರೇ ಕಾರಣ ಎಂದು ದೂಷಿಸಿದ ಮಾದೇಗೌಡರು- ಕೃಷ್ಣ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದಲೇ ಈ ಬಾರಿ ಕುಡಿಯುವ ನೀರಿಗೂ ತತ್ವಾರ ಬರುವ ಪರಿಸ್ಥಿತಿ ಎದುರಾಗಿದೆ. ಉತ್ತಮ ಮಳೆಯಾಗಿ ಕನ್ನಂಬಾಡಿ ತುಂಬಿದರೂ ರೈತರು ಕೃಷಿಗೆ ಅಗತ್ಯವಾದ ಬೀಜ, ರಸಗೊಬ್ಬರಗಳನ್ನು ಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ












Click it and Unblock the Notifications