ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೇರಿಗಳಲ್ಲಿ ಕನ್ನಡ : ತನಿಖಾ ತಂಡಗಳ ಅಸ್ತ್ರ ಛೂ ಬಿಟ್ಟ ಇದಿನಬ್ಬ

By Staff
|
Google Oneindia Kannada News

ಕಚೇರಿಗಳಲ್ಲಿ ಕನ್ನಡ : ತನಿಖಾ ತಂಡಗಳ ಅಸ್ತ್ರ ಛೂ ಬಿಟ್ಟ ಇದಿನಬ್ಬ
ಆಡಳಿತದಲ್ಲಿ ಕನ್ನಡ ಬಳಸದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ

ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಅನುಷ್ಠಾನ ಅನೂಚಾನವಾಗಿ ಆಗುವಂತೆ ನಿಗಾ ವಹಿಸಲು ವಿಶೇಷ ತನಿಖಾ ತಂಡಗಳನ್ನು ರಚಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಮಂಗಳವಾರ (ಜೂ.24) ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಬಿ.ಎಂ.ಇದಿನಬ್ಬ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳನ್ನು ಸೇರಿಸಿ ತಂಡಗಳನ್ನು ರಚಿಸುತ್ತೇವೆ. ಈ ತಂಡಗಳು ಕನ್ನಡ ಬಳಸದ ಅಧಿಕಾರಿಗಳ ಕುರಿತು ವರದಿ ಸಲ್ಲಿಸಲಿವೆ. ಅದನ್ನು ಆಧರಿಸಿ, ಕನ್ನಡವನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದರು.

ಗಂಭೀರ ಸ್ವರೂಪದಲ್ಲಿ ವಿಶೇಷ ತಂಡಗಳು ನಿಗಾ ವಹಿಸಲಿದ್ದು, ಇದಕ್ಕೆ ಕಾಲದ ಗಡುವಿರುವುದಿಲ್ಲ. ತಂಡ, ಯಾವಾಗ ಬೇಕಾದರೂ ಕಚೇರಿಗಳಿಗೆ ಧಾವಿಸಬಹುದು. ತಂಡಗಳಲ್ಲದೆ ಖುದ್ದು ತಾವು ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಕೂಡ ಕಚೇರಿಗಳಲ್ಲಿ ಕನ್ನಡ ಬಳಕೆಯ ಕುರಿತು ನಿಗಾ ಇಡುವುದಾಗಿ ಇದಿನಬ್ಬ ಹೇಳಿದರು.

ಈ ತಂಡಗಳು ಬೇರೆ ಭಾಷೆಗಳ ವಿರುದ್ಧ ಕೆಲಸ ಮಾಡುವುದಿಲ್ಲ. ಆದರೆ, ಪ್ರಾಥಮಿಕ ಆದ್ಯತೆ ಕನ್ನಡಕ್ಕೆ ಸಿಗಬೇಕು ಎಂಬುದು ತಂಡದ ಉದ್ದೇಶ ಎಂದು ಇದಿನಬ್ಬ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X