ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರ ಕೈಗೆ ‘ಗೊರೂರು.. ನೆನಪುಗಳು’

By Staff
|
Google Oneindia Kannada News

ಓದುಗರ ಕೈಗೆ ‘ಗೊರೂರು.. ನೆನಪುಗಳು’
ಅಣೆಕಟ್ಟು ನಿರ್ಮಾಣದ ದೆಸೆಯಿಂದಾಗಿ ಊರೊಂದರ ದಿಕ್ಕುದೆಸೆಯ ಮೇಲಾದ ಪರಿಣಾಮದ ಚಿತ್ರಣವಿರುವ ಪುಸ್ತಕಗಳು ಕನ್ನಡದಲ್ಲಿ ಅಪರೂಪ. ಈ ನಿಟ್ಟಿನಲ್ಲಿ ‘ಗೊರೂರು.. ನೆನಪುಗಳು’ ಕೃತಿ ಗಮನಾರ್ಹ ಎನ್ನಿಸುತ್ತದೆ.

ಹೆಸರು ಹೇಳಿದ ಕೂಡಲೇ ಸಾಹಿತ್ಯ ವಾತಾವರಣವನ್ನು ಕಣ್ಗೆ ಕಟ್ಟುವ ಊರುಗಳು ಕೊಡುವ ನೆನಪುಗಳೇ ವಿಭಿನ್ನ. ತೀರ್ಥಹಳ್ಳಿ, ಧಾರವಾಡ, ಉಡುಪಿ... ಹೀಗೆ. ಊರುಗಳ ಹೆಸರೇ ಸಾಹಿತಿಗಳನ್ನು ನೆನಪಿಸುತ್ತವೆ. ಹಾಗೇ ಗೊರೂರು.

‘ಗೊರೂರು.. ನೆನಪುಗಳು’ ಎಂಬ ವಿಶೇಷ ಪುಸ್ತಕವೊಂದು ಭಾನುವಾರ ಬಿರಿkುೕ ಬೆಂಗಳೂರಿನಲ್ಲಿ ಅನಾವರಣಗೊಂಡಿತು.

ಗೊರೂರು ರಾಮಸ್ವಾಮಿ ಅಯ್ಯಂಗಾರರಂತಹ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದ ಊರು ಗೊರೂರು. ಗೊರೂರಿನಲ್ಲಿ ಹುಟ್ಟಿ ಬೆಳೆದ ಹಲವು ನಿವಾಸಿಗಳು, ಸಣ್ಣ ಪುಟ್ಟ ಸಾಹಿತಿಗಳು, ಸಾಧಕರು ರಾಜ್ಯಾದ್ಯಂತ ಹರಡಿದ್ದಾರೆ. ಭಾನುವಾರ ಬಿಡುಗಡೆಯಾದ ಗೊರೂರು...ನೆನಪುಗಳು ಹೊಸ ಪುಸ್ತಕದಲ್ಲಿ ಗೊರೂರಿನ ಸೌಂದರ್ಯ ತವಕ-ತಲ್ಲಣಗಳ ಚಿತ್ರಣವಿದೆ.

ಗೊರೂರು ಸೋಮಶೇಖರ ಬರೆದಿರುವ ಗೊರೂರು ನೆನಪುಗಳು ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದವರು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸುಭಾಷ್‌ ಭರಣಿ. ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಮಹಾ ಸ್ವಾಮಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಲೇಖಕ ಗೊರೂರು ಸೋಮಶೇಖರ ಅವರು ಹೇಮಾವತಿ ಜಲಾಶಯ ನಿರ್ಮಾಣ ಕಾರ್ಯದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್‌ ಆಗಿ ದುಡಿದು, ಆಣೆಕಟ್ಟು ನಿರ್ಮಾಣ ಕಾರ್ಯವನ್ನು ಹತ್ತಿರದಿಂದ ಬಲ್ಲವರು. ಅಣೆಕಟ್ಟಿನಿಂದ ಗೊರೂರು ಊರಿನ ಮೇಲಾದ ಗುಣಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳ ಬಗ್ಗೆ ಸೋಮಶೇಖರ್‌ ಬರೆದಿದ್ದಾರೆ. ಗೊರೂರು ಪರಿಸರದ ಮೇಲೆ ಅಣೆಕಟ್ಟು ಮತ್ತು ಹವಾಮಾನದ ಪರಿಣಾಮಗಳ ಬಗ್ಗೆ ಪುಸ್ತಕ ಬೆಳಕು ಚೆಲ್ಲುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X