ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವರ್ಷಗಳ ಹಿಂದಿನ ಬೀಸುದೊಣ್ಣೆಯಿಂದ ಬಂಗಾರಪ್ಪ ಪಾರು

By Staff
|
Google Oneindia Kannada News

7 ವರ್ಷಗಳ ಹಿಂದಿನ ಬೀಸುದೊಣ್ಣೆಯಿಂದ ಬಂಗಾರಪ್ಪ ಪಾರು
ಪಿ.ಸಿ.ದಂತ ಕಾಲೇಜು ಹಗರಣ ; ಸಾಕ್ಷ್ಯದ ಪುಷ್ಟಿ ಸಿಗದ ಕಾರಣ ಬಂಗಾರಪ್ಪ ಬಚಾವ್‌. ಇದಲ್ಲದೆ ಇನ್ನೂ ಎರಡು ಆರೋಪ ಇವರ ಮೇಲೆ ಹಾಗೇ ಇದೆ.

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಪಿ.ಸಿ. ದಂತ ಕಾಲೇಜು ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಸಿಬಿಐ ಏಳು ವರ್ಷದ ಹಿಂದೆ ಕೇಸು ಜಡಿದಿತ್ತು. ಪ್ರಕರಣದ ವಿಚಾರಣೆಗೆಂದೇ ನಿಯೋಜಿತವಾಗಿದ್ದ ವಿಶೇಷ ಕೋರ್ಟು ಬಂಗಾರಪ್ಪ ದೋಷ ಮುಕ್ತ ಎಂದು ಸೋಮವಾರ ತೀರ್ಪು ಕೊಟ್ಟಿತು.

ಬಂಗಾರಪ್ಪನವರ ಮೇಲೆ ಹೊರಿಸಲಾಗಿದ್ದ ಆರೋಪಗಳನ್ನು ಸಾಬೀತು ಪಡಿಸಲು ಸಾಕಷ್ಟು ಪುರಾವೆ ಒದಗಿಸುವಲ್ಲಿ ಅರ್ಜಿದಾರರು ವಿಫಲವಾದ ಕಾರಣ ಬಂಗಾರಪ್ಪನವರನ್ನು ದೋಷ ಮುಕ್ತ ಎಂದು ಪರಿಗಣಿಸಲಾಗಿರುವುದಾಗಿ ಸಿಬಿಐ ಕೋರ್ಟಿನ ವಿಶೇಷ ಮುಖ್ಯ ನ್ಯಾಯಮೂರ್ತಿ ಎಸ್‌.ವಿ.ಪಾಟೀಲ್‌ ತೀರ್ಪಿನಲ್ಲಿ ಘೋಷಿಸಿದರು.

ಹಗ-ರ-ಣ-ಕ್ಕೆ ಸಂಬಂ-ಧಿಸಿ-ದಂ-ತೆ ಆಗಿನ ಆರೋಗ್ಯ ಸಚಿವರಾಗಿದ್ದ ಜಿ.ಪುಟ್ಟಸ್ವಾಮಿ ಗೌಡ, ಬಂಗಾರಪ್ಪ ಸೇರಿದಂತೆ ಆರು ಮಂ-ದಿ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದರು. ಪಿ.ಸಿ. ದಂತ ಮತ್ತು ನರ್ಸಿಂಗ್‌ ಕಾಲೇಜಿಗೆ ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಕೊಡಿಸಿ, ಪ್ರವೇಶಾತಿಯನ್ನು 1991- 93ರಲ್ಲಿ ಸಮರ್ಪಕಗೊಳಿಸಲಾಗಿತ್ತು. ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ- 1976’ರ ನಿಯಮಾವಳಿಗಳನ್ನು ಉಲ್ಲಂಘಿಸಿ ಮಾನ್ಯತೆ ಕೊಡಲಾಗಿತ್ತು. ಹೀಗಾಗಿ ಇದು ಭ್ರಷ್ಟಾಚಾರ ಎಂದು ಸಿಬಿಐನ ಭ್ರಷ್ಟಾಚಾರ ನಿರ್ಮೂಲನಾ ಘಟಕ ಕೇಸು ಜಡಿದಿತ್ತು. ಸುಪ್ರಿಕೋರ್ಟಿನ ನಿರ್ದೇಶನದಂತೆ ಮೇ 10, 1996ರಲ್ಲಿ ಕೇಸು ಹಾಕಲಾಗಿತ್ತು.

ಕಾಲೇಜಿನ ಪ್ರಾಂಶುಪಾಲ ಆರ್‌.ಡಿ.ಪೆನ್ನತೂರ್‌, ಕಾಲೇಜು ಟ್ರಸ್ಟಿನ ಅಧ್ಯಕ್ಷ ಆರ್‌.ಬಿ.ಚೌಧುರಿ, ಬೆಂಗಳೂರು ವಿಶ್ವವಿದ್ಯಾಲಯದ ಆಗಿನ ಸಮಿತಿಯಾಂದರ ಅಧ್ಯಕ್ಷ ಎ.ಮಂಜು ಮತ್ತು ಬಂಗಾರಪ್ಪನವರ ಆಪ್ತ ಕಾರ್ಯದರ್ಶಿ ಎ.ಸೂರಿ ಬಾಬು ಪ್ರಕರಣದ ಇತರೆ ಆರೋಪಿಗಳಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 51 ಸಾಕ್ಷಿಗಳ ವಿಚಾರಣೆ ನಡೆಸಲಾಯಿತು. ಆರೋಪಕ್ಕೆ ಪುಷ್ಟಿ ಕೊಡುವಷ್ಟು ಸಾಕ್ಷ್ಯಗಳು ದೊರಕದ ಕಾರಣ ಬಂಗಾರಪ್ಪ ಆರೋಪ ಮುಕ್ತರಾದರು.

ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಂಗಾರಪ್ಪ ಕ್ಲಾಸಿಕ್‌ ಕಂಪ್ಯೂಟರ್‌ ಹಗರಣ ಮತ್ತು ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪಗಳನ್ನೂ ಹೊತ್ತಿದ್ದಾರೆ. ಈ ಪ್ರಕರಣಗಳ ಕೇಸುಗಳು ಇವತ್ತಿಗೂ ಕೋರ್ಟಿನಲ್ಲಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X