ಶೃಂಗೇರಿಸಂಸ್ಥಾನ ಧರ್ಮಾಧಿಕಾರಿಯಾಗಿ ಸೋಮಯಾಜಿ
ಬೆಂಗಳೂರು : ಪ್ರಸಿದ್ಧ ಯಾತ್ರಾಸ್ಥಳ ಶೃಂಗೇರಿಯಲ್ಲಿರುವ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ಶಾರದಾ ಪೀಠದ ಧರ್ಮಾಧಿಕಾರಿಯಾಗಿ ದೈವಜ್ಞ ಕೆ. ನರಸಿಂಹ ಸೋಮಯಾಜಿ ಅವರನ್ನು ಮಠಾಧೀಶರಾದ ಭಾರತೀ ತೀರ್ಥ ಮಹಾ ಸ್ವಾಮೀಜಿ ನೇಮಕ ಮಾಡಿದ್ದಾರೆ.
ಸ್ವಾಮೀಜಿ ಅವರ ಪರವಾಗಿ ಮಠದ ಆಡಳಿತ ನಡೆಸುತ್ತಿರುವ ವಿ. ಆರ್. ಗೌರಿ ಶಂಕರ್ ಅವರು ನೇಮಕಾತಿ ಆದೇಶ ಪತ್ರ ನೀಡಿ, ಸ್ವಾಮೀಜಿಯವರ ಶುಭ ಸಂದೇಶವನ್ನು ನರಸಿಂಹ ಸೋಮಯಾಜಿಯವರಿಗೆ ತಲುಪಿಸಿದ್ದಾರೆ.
ನರಸಿಂಹ ಸೋಮಯಾಜಿಯವರು ವಾಸ್ತು ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶೃಂಗೇರಿ ಮಠ ನಡೆಸುತ್ತಿರುವ ಕಲ್ಪತರು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...











Click it and Unblock the Notifications