ರಾಜ್ಯಕ್ಕೆ ಮಳೆ ತರಲಿದೆ ಬಂಗಾಳೀ ಚಂಡಮಾರುತ
ಬೆಂಗಳೂರು : ರಾಜ್ಯದಲ್ಲಿ ಸುಡುವ ಬಿಸಿಲು ದಿನೇ ದಿನೇ ಜನರ ನೆಮ್ಮದಿ ಕಳೆಯುತ್ತಿರುವಾಗ ಇಲ್ಲಿದೆ ತಂಪಾದ ಸುದ್ದಿ.
ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತ ಎದ್ದಿರುವುದರಿಂದ ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಒಳ ನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ಹೇಳಿದೆ.
ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತಗೊಂಡಿರುವ ಮಾರುತ 650 ಕಿಮೀ ವೇಗದಲ್ಲಿ ತಮಿಳುನಾಡು ಈಶಾನ್ಯ ಭಾಗದತ್ತ ಚಲಿಸುತ್ತಿದೆ. ವಾಯುಭಾರ ಕುಸಿತದಿಂದ ರಾಜ್ಯ ಒಳ ನಾಡಿನಲ್ಲಿ ಮಳೆಯಾಗಲಿದೆಯಂತೆ. ಸದ್ಯ. ಈ ಬಿರು ಬಿಸಿಲಲ್ಲಿ ಒಣಗುತ್ತಿರುವಾಗ, ಮಳೆ ಬಂದರೆ ಅದೇ ಸ್ವರ್ಗ. ಅದರ ಹಿಂದಿನ ಕಾರಣ ಚಂಡಮಾರುತವೋ, ಸಹಜ ಮಳೆಗಾಲವೋ ಎಂಬ ವಿಶ್ಲೇಷಣೆಗೆ ವ್ಯವಧಾನ ಇಲ್ಲ.
ಮೇ 11, 12ರಂದು, ಕರಾವಳಿ ಹಾಗೂ ಒಳನಾಡಿನ ಅಲ್ಲಲ್ಲಿ ತುಸು ಮಳೆಯಾಗಿದೆ. ಸುಳ್ಯದಲ್ಲಿ ಗರಿಷ್ಠ 3 ಸೆ. ಮೀ, ಹಳಿಯಾಳ, ಶಿರಸಿ, ಯಲ್ಲಾಪುರ, ಮುಂಡಗೋಡ ಮುಂತಾದ ಕಡೆಗಳಲ್ಲಿ ತಲಾ 1 ಸೆ. ಮೀ. ಮಳೆ ಸುರಿದಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಹಾಗೂ ನೆಲಮಟ್ಟದ ಗಾಳಿ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications