ಬಿಜಾಪುರದಲ್ಲಿ ಭೀಮಾ ಶಂಕರ ಸಕ್ಕರೆ ಕಾರ್ಖಾನೆ
ಬಿಜಾಪುರ : ಈ ಭಾಗದ ಕಬ್ಬು ಬೆಳೆಗಾರರ ಬಹು ನಿರೀಕ್ಷೆಯ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ವರ್ಷಾಂತ್ಯದಲ್ಲಿ ಕಾರ್ಯಾರಂಭ ಮಾಡಲಿದೆ.
ಅಂದಾಜು 82 ಕೋಟಿ ರುಪಾಯಿ ವೆಚ್ಚದಲ್ಲಿ ಕಾರ್ಖಾನೆ ರೂಪುಗೊಳ್ಳಲಿದೆ. ಸರ್ಕಾರ 9 ಕೋಟಿ ರುಪಾಯಿಗಳನ್ನು ಷೇರು ರೂಪದಲ್ಲಿ ತೊಡಗಿಸಲಿದೆ ಎಂದು ಶಾಸಕ ಹಾಗೂ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರವಿಕಾಂತ್ ಪಾಟೀಲ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿದಿನ 2500 ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹೊಂದಲಿದೆ. ಇದರೊಂದಿಗೆ 11 ಮೆಗಾವ್ಯಾಟ್ ವಿದ್ಯುತ್ತನ್ನು ಕೂಡ ಕಾರ್ಖಾನೆ ಉತ್ಪಾದಿಸಲಿದೆ ಎಂದು ರವಿಕಾಂತ ಪಾಟೀಲ್ ಕಾರ್ಖಾನೆಯ ಸಾಮರ್ಥ್ಯದ ವಿವರ ನೀಡಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications