ಬಿಎಸ್‌ಎನ್‌ಎಲ್‌ ದೂರವಾಣಿ ದರ ತುಸು ಇಳಿಕೆ

ನವದೆಹಲಿ : ವಿವಿಧ ರಾಜಕೀಯ ಪಕ್ಷಗಳ ಹಾಗೂ ಗ್ರಾಹಕರ ಪ್ರತಿಭಟನೆಗೆ ಮಣಿದಿರುವ ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌(ಬಿಎಸ್‌ಎನ್‌ಎಲ್‌) ದೂರವಾಣಿ ಕರೆಗಳ ದರಗಳನ್ನು ಮಂಗಳವಾರ (ಮೇ13) ಮರು ಪರಿಷ್ಕರಿಸಿದೆ.

ಸ್ಥಿರ ದೂರವಾಣಿಯಿಂದ ಮೊಬೈಲ್‌ಗಳಿಗೆ ಮಾಡುವ ಕರೆಯ ದರದಲ್ಲಿ ಸ್ವಲ್ಪ ಮಟ್ಟಿಗಿನ ಕಡಿತ ಪ್ರಕಟಿಸಿರುವ ಬಿಎಸ್‌ಎನ್‌ಎಲ್‌- ಪ್ರತಿ ತಿಂಗಳ ಉಚಿತ ಕರೆಗಳ ಸಂಖ್ಯೆಯನ್ನೂ ಸ್ವಲ್ಪ ಮಟ್ಟಿಗೆ ಹೆಚ್ಚಿಸಿದೆ.

ಬಿಎಸ್‌ಎನ್‌ಎಲ್‌ನ ಮರು ದರ ಪರಿಷ್ಕರಣೆ ಇಂತಿದೆ :

  • ಗ್ರಾಮೀಣ ಪ್ರದೇಶದಲ್ಲಿ ಪ್ರತಿ ತಿಂಗಳ ಉಚಿತ ಕರೆಗಳ ಸಂಖ್ಯೆ 50 ರಿಂದ 75ಕ್ಕೆ ಹೆಚ್ಚಳ.
  • ನಗರ ಪ್ರದೇಶಗಳಲ್ಲಿ ಉಚಿತ ಕರೆಗಳ ಸಂಖ್ಯೆ 30 ರಿಂದ 50ಕ್ಕೆ ಏರಿಕೆ.
  • ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಮಾಡುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 1.20 ರುಪಾಯಿ ನಿಗದಿಪಡಿಸಲಾಗಿದೆ. ಈ ಮುನ್ನ ಈ ದರ 30 ಸೆಕೆಂಡ್‌ಗಳಿಗೆ 1.20 ರುಪಾಯಿ ಆಗಿತ್ತು .
ಮಹಾನಗರ್‌ ಟೆಲಿಫೋನ್‌ ಲಿಮಿಟೆಡ್‌ (ಎಂಟಿಎನ್‌ಎಲ್‌) ಕೂಡ ದೂರವಾಣಿ ದರಗಳನ್ನು ಪರಿಷ್ಕರಿಸಿದ್ದು - ಉಚಿತ ಕರೆಗಳ ಸಂಖ್ಯೆಯನ್ನು 30 ರಿಂದ 60ಕ್ಕೆ ಹೆಚ್ಚಿಸಿದೆ. ಆದರೆ, ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಮಾಡುವ ಕರೆಗಳ ದರಗಳಲ್ಲಿ ಎಂಟಿಎನ್‌ಎಲ್‌ ಯಾವುದೇ ಬದಲಾವಣೆ ಮಾಡಿಲ್ಲ .

ದೂರವಾಣಿ ದರಗಳ ಮರು ಪರಿಷ್ಕರಣೆಯಿಂದ ಬಿಎಸ್‌ಎನ್‌ಎಲ್‌ ಆದಾಯ ಖೋತಾ ಅನುಭವಿಸಲಿದೆ. ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಮಾಡುವ ಕರೆಗಳ ದರ ಇಳಿಕೆಯಿಂದ 2600 ಕೋಟಿ ರುಪಾಯಿ ಹಾಗೂ ಉಚಿತ ಕರೆಗಳ ಹೆಚ್ಚಳದಿಂದ 876 ಕೋಟಿ ರುಪಾಯಿ ವಾರ್ಷಿಕ ಆದಾಯ ಕಡಿಮೆಯಾಗಲಿದೆ. ದರ ಪರಿಷ್ಕರಣೆಯಿಂದ ಎಂಟಿಎನ್‌ಎಲ್‌ ವಾರ್ಷಿಕ 140 ಕೋಟಿ ರುಪಾಯಿ ಆದಾಯ ಖೋತಾ ಎದುರಿಸಲಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಅರುಣ್‌ ಶೌರಿ ತಿಳಿಸಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+