ಶ್ರವಣಬೆಳಗೊಳ ಬೆಟ್ಟದಲ್ಲಿ ದರೋಡೆ, ಲೂಟಿ
ಹಾಸನ: ಶ್ರವಣ ಬೆಳಗೊಳದ ವಿಂಧ್ಯಗಿರಿಗೆ ಭಾನುವಾರ ನುಗ್ಗಿದ ಡಕಾಯಿತರ ಗುಂಪು ಪೊಲೀಸರ ಬಂದೂಕು ಅಪಹರಿಸಿ, ಅಪಾರ ಮೊತ್ತದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಬೆಳಗಿನ ಜಾವ 3 ಗಂಟೆಗೆ ಡಕಾಯಿತರ ತಂಡ ಗೊಮ್ಮಟೇಶ್ವರ ಮೂರ್ತಿಯ ಬಳಿ ಕಾವಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಎಂ. ಡಿ. ಹರೀಶ್ ಹಾಗೂ ಬೆಟ್ಟದ ಕಾವಲುಗಾರರಾದ ರಂಗಸ್ವಾಮಿ, ತಿಮ್ಮೇಗೌಡ ಎಂಬವರನ್ನು ಕಲ್ಲು ದೊಣ್ಣೆ ಹಾಗೂ ಇತರ ಆಯುಧಗಳಿಂದ ಥಳಿಸಿ, ಕೈ ಕಾಲುಗಳನ್ನು ಕಟ್ಟಿ ಹಾಕಿ ಅವರ ಬಂದುಕುಗಳನ್ನು ಕಿತ್ತುಕೊಂಡಿದ್ದಾರೆ.
ನಂತರ ಗೊಮ್ಮಟೇಶ್ವರ ಮೂರ್ತಿಯ ಬಳಿಯಿದ್ದ ಹುಂಡಿಯನ್ನು ಒಡೆದು ಹಣ ದೋಚಿದ್ದಲ್ಲದೆ, ಪಕ್ಕದಲ್ಲೇ ಇದ್ದ ಉಪ್ಪರಿಗೆ ಬ್ರಹ್ಮ ದೇವರ ದೇವಾಲಯಕ್ಕೂ ನುಗ್ಗಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ತಂಡದಲ್ಲಿ ಏಳೆಂಟು ಮಂದಿ ಡಕಾಯಿತರಿದ್ದು ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದುದಾಗಿ ಕಾವಲುಗಾರರು ಹೇಳಿದ್ದಾರೆ.
ದರೋಡೆಕೋರರು ದೋಚಿದ ಹಣ ಹಾಗೂ ಆಭರಣಗಳ ಮೌಲ್ಯವನ್ನು ಇನ್ನೂ ಅಂದಾಜು ಮಾಡಲಾಗಿಲ್ಲ .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications