‘ವಾಜಪೇಯಿ ತಾತಾ, ನೀವು ಯಾಕೆ ಮದ್ವೆ ಆಗ್ಲಿಲ್ಲ ?’
ಚಿತ್ರಕೂಟ : ‘ನೀವು ಯಾಕೆ ಮದುವೆ ಆಗಲಿಲ್ಲ ?’ ಪುಟ್ಟ ಬಾಲದ ಮುಗ್ಧ ನಗು ಬೀರುತ್ತಾ ಪ್ರಧಾನಿ ವಾಜಪೇಯಿ ಅವರನ್ನು ಪ್ರಶ್ನಿಸಿದ.
‘ನನ್ನ ಮದುವೆ ಆಗೋಕೆ ಯಾವ ಹುಡುಗೀನೂ ಮುಂದಾಗಲಿಲ್ಲ’ ಅಂತ ವಾಜಪೇಯಿ ಉತ್ತರಿಸಿದಾಗ ಸಭೆಯಲ್ಲಿ ಗೊಳ್ಳನೆ ನಗು.
ದೀನ್‌ದಯಾಳ್ ಸಂಶೋಧನಾ ಕೇಂದ್ರ ಆಯೋಜಿಸಿದ್ದ ರಾಮನಾಥ ಆಶ್ರಮದ ಶಾಲೆಯ ಮಕ್ಕಳೊಂದಿಗೆ ನಡೆದ ವಾಜಪೇಯಿ ಅವರ ಸಂವಾದದ ಝಲಕ್ ಇದು.
ಮದುವೆ ಬಗ್ಗೆ ಪ್ರಶ್ನೆ ಕೇಳಿದ ಮುದ್ದು ಪುಟ್ಟನನ್ನು ವಾಜಪೇಯಿ, ‘ನಿಮ್ಮ ಮನೆಗೆ ಬಂದರೆ ನಂಗೆ ಊಟ ಹಾಕ್ತೀಯಾ’ ಅಂತ ಕೇಳಿದರು. ತಕ್ಷಣವೇ ಹುಡುಗ, ‘ನಿಮಗೆ ಏನೇನು ಇಷ್ಟ’ ಅಂತ ಕೇಳಿ ನೆನಪಿನಲ್ಲಿಟ್ಟುಕೊಳ್ಳೋಕೆ ಶುರುಮಾಡಿದ. ವಾಜಪೇಯಿ ಮಕ್ಕಳೊಟ್ಟಿಗೆ ಮಗುವಾಗಿ ಜೋರಾಗಿ ನಕ್ಕಾಗ, ಕಣ್ಣಂಚಲಿ ಆನಂದ ಭಾಷ್ಪವಿತ್ತು.
ವಿಶ್ವಕಪ್ ಕ್ರಿಕೆಟ್‌ನಲ್ಲಿ ಚೆನ್ನಾಗಿ ಆಡಿದ ಭಾರತವನ್ನು ಕೊಂಡಾಡಿದ ಪ್ರಧಾನಿ, ಮುಂದಿನ ಕಪ್ ಗೆಲ್ಲಲೆಂದು ಹಾರೈಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಮತ್ತು ಕ್ರೀಡೆಯ ಮಹತ್ತ್ವವನ್ನು ವಾಜಪೇಯಿ ಮಕ್ಕಳಲ್ಲಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications