ಕನ್ನಡ ಮಾಧ್ಯಮದ ವಿದ್ಯಾರ್ಥಿಗೆ ತಮಿಳು ಪ್ರಶ್ನೆಪತ್ರಿಕೆ
ತುಮಕೂರು : ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೋದ ಕನ್ನಡ ಮಾಧ್ಯಮದ ವಿದ್ಯಾರ್ಥಿ ತಮಿಳಿನಲ್ಲಿದ್ದ ವಿಜ್ಞಾನ ಪತ್ರಿಕೆ ನೋಡಿ ಪೆಚ್ಚಾಗಿ, ಸೋತ ಪ್ರಸಂಗ ವರದಿಯಾಗಿದೆ.
ಸೀಗೇಹಳ್ಳಿಯ ಟಿ.ಎನ್.ಬಸವರಾಜು ಕನ್ನಡ ಮಾಧ್ಯಮದ ವಿದ್ಯಾರ್ಥಿ. ಈತನ ಹೆಸರಿನ ಮುಂದೆ ಮಾಧ್ಯಮ ಎಂಬ ಕಾಲಮ್ಮಿನಲ್ಲಿ ಯಾರೋ ತಮಿಳು ಎಂದು ಬರೆದದ್ದೇ ಯಡವಟ್ಟಾಗಿದೆ. ಈತನಿಗೆ ಕೊಟ್ಟ ವಿಜ್ಞಾನ ಪ್ರಶ್ನೆ ಪತ್ರಿಕೆ ಕನ್ನಡ ಮಾಧ್ಯಮದಲ್ಲಿರುವ ಬದಲು ತಮಿಳು ಮಾಧ್ಯಮದಲ್ಲಿತ್ತು. ಪರೀಕ್ಷೆ ಕೋಣೆಯ ಪರಿಶೀಲಕರನ್ನು ಕನ್ನಡ ಪ್ರಶ್ನೆಪತ್ರಿಕೆ ಒದಗಿಸುವಂತೆ ಬಸವರಾಜು ಅಲವತ್ತುಕೊಂಡ. ಆದರೆ, ಅವರು ಕರುಣೆ ತೋರಲಿಲ್ಲ. ಸೂಪರ್‌ವೈಸರ್ ಮೊರೆಹೋದರೂ ಪ್ರಯೋಜನವಾಗಲಿಲ್ಲ.
ಬೇಸತ್ತ ವಿದ್ಯಾರ್ಥಿ ಪರೀಕ್ಷೆಯಲ್ಲಿ ಏನೂ ಬರೆಯಲಾರದೆ, ಉತ್ತರ ಪತ್ರಿಕೆಯಲ್ಲಿ ಬರೆದ ಒಂದೇ ಒಂದು ಸಾಲು ಹೀಗಿತ್ತು- ‘ಯಾರದ್ದೋ ಬೇಜವಾಬ್ದಾರಿಯಿಂದಾದ ತಪ್ಪಿಗೆ ನಾನು ಬಲಿಯಾಗಿದ್ದೇನೆ’.
ತುಮಕೂರು ಡಿಡಿಪಿಐ ಕಚೇರಿಯವರನ್ನು ಈ ದೂರಿನ ಬಗ್ಗೆ ಕೇಳಿದಾಗ, ತಾರಮ್ಮಯ್ಯ ಮಾಡಿದರು. ಬಸವರಾಜು ಒಂದು ವರ್ಷ ಹಾಳಾಯಿತು ಅಂತ ಗೋಳೋ ಎಂದು ಅಳುತ್ತಿದ್ದ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications