ಉಗ್ರರ ಬೆದರಿಕೆ ; ಸೌರವ್ ಗಂಗೂಲಿಗೆ ಬಿಗಿಭದ್ರತೆ
ಕೋಲ್ಕತ್ತಾ : ಲಷ್ಕರ್-ಇ-ತೊಯಿಬಾ ಉಗ್ರರ ಬೆದರಿಕೆಯ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಅವರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಉಗ್ರರ ಬೆದರಿಕೆಯ ಹಿನ್ನೆಲೆಯಲ್ಲಿ ಗಂಗೂಲಿ ಅವರ ನಿವಾಸಕ್ಕೆ ಹೆಚ್ಚುವರಿ ಕಮಾಂಡೊಗಳ ರಕ್ಷಣೆ ಒದಗಿಸಲಾಗಿದೆ. ಕೇಂದ್ರ ಗುಪ್ತಚಾರ ಏಜೆನ್ಸಿಗಳ ಮಾಹಿತಿಯ ಮೇರೆಗೆ ಗಂಗೂಲಿ ಅವರ ಬೆಹಲಾದಲ್ಲಿನ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಶ್ ಸಿಂಗ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಈ ಮುನ್ನ ಕಾಶ್ಮೀರಿ ಉಗ್ರರಿಂದ ಬೆದರಿಕೆ ಎದುರಿಸಿದ್ದ ಗಂಗೂಲಿ ಅವರ ನಿವಾಸಕ್ಕೆ ಒಂದು ವರ್ಷದ ಹಿಂದೆಯೇ ರಕ್ಷಣೆ ಒದಗಿಸಲಾಗಿತ್ತು . ಪ್ರಸ್ತುತ ಆ ರಕ್ಷಣೆಯನ್ನು ಹೆಚ್ಚಿಸಲಾಗಿದೆ ಎಂದು ರಾಜೇಶ್ ಸಿಂಗ್ ಹೇಳಿದರು.
ಕಮಾಂಡೊಗಳೊಂದಿಗೆ ಮಫ್ತಿಯಲ್ಲಿರುವ ಪೊಲೀಸರು ಕೂಡ ಗಂಗೂಲಿ ಅವರ ನಿವಾಸದ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳುವರು. ಗಂಗೂಲಿ ಅವರ ಎಸ್ಕಾರ್ಟ್ಸ್ ವಾಹನಗಳನ್ನು ಹೆಚ್ಚಿಸಲು ಕೂಡ ತೀರ್ಮಾನಿಸಲಾಗಿದೆ ಎಂದು ರಾಜೇಶ್ ಸಿಂಗ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications