ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಚುನಾವಣೆಗೆ ಮುಂಚೆ ಸರ್ಕಾರ ರಾಜೀನಾಮೆ ಕೊಡಬೇಕು’

By Staff
|
Google Oneindia Kannada News

ಬೆಂಗಳೂರು : ಚುನಾವಣೆ ಪೂರ್ಣ ಪ್ರಮಾಣದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯಬೇಕಾದರೆ ಏನು ಮಾಡಬೇಕು? ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್‌.ಗಿಲ್‌ ಕೆಲವು ಸುಧಾರಣಾ ಸಲಹೆಗಳನ್ನು ಕೊಟ್ಟಿದ್ದಾರೆ....

  • ಚುನಾವಣೆಗೆ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರಾಜೀನಾಮೆ ಕೊಡಬೇಕು. ತಟಸ್ಥ ರಾಜಕೀಯ ಪರಿಸ್ಥಿತಿಯಲ್ಲೇ ಚುನಾವಣೆ ನಡೆಯಬೇಕು. ಸರ್ಕಾರ ನಡೆಸುವ ಪಕ್ಷ ಚುನಾವಣೆ ವೇಳೆ ಮತಗಳ ಕೊಳ್ಳೆ ಹೊಡೆಯಲು ತನ್ನ ಅಧಿಕಾರ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
  • ವಿರೋಧ ಪಕ್ಷಗಳ ಜೊತೆ ಚರ್ಚಿಸಿ, ಜನರಿಗೆ ನಂಬಿಕೆಯಿರುವ ಹಾಗೂ ರಾಜಕೀಯ ವಲಯದಲ್ಲಿ ಅನುಭವ ಇರುವ ಯಾವುದೇ ಪಕ್ಷ ಪ್ರತಿನಿಧಿಸದ ತಟಸ್ಥ ರಾಜ್ಯಪಾಲರ ಅಧಿಕಾರದಲ್ಲಿ ಚುನಾವಣೆ ನಡೆಯಬೇಕು.
  • ಚುನಾವಣಾ ಆಯುಕ್ತ ಮತ್ತು ರಾಷ್ಟ್ರೀಯ ಸಮಿತಿಗಳ ಅಧ್ಯಕ್ಷರ ಆಯ್ಕೆ ಪಕ್ಷ ರಾಜಕೀಯವಾಗದೆ ತಟಸ್ಥವಾಗಿರಬೇಕು.
  • ಅಪರಾಧಿಗಳು ರಾಜಕೀಯ ಪ್ರವೇಶಿಸದಂತೆ ತಡೆಯಲು ಕೆಲವು ಸಂಹಿತೆಗಳನ್ನು ಇನ್ನೂ ಬಿಗುವು ಮಾಡಬೇಕು.
  • ಸೈನಿಕರಿಗೆ ಬದಲಿ ಮತದಾನ ವ್ಯವಸ್ಥೆ ಜಾರಿಗೆ ತರಬೇಕು. ಈಗ ಸೈನಿಕರು ಅಂಚೆ ಮೂಲಕ ಮತ ಹಾಕುತ್ತಿದ್ದಾರೆ. ಇದು ಪಾರದರ್ಶಕವಾಗಿಲ್ಲ. ಸೈನಿಕರ ಮತ ಚಲಾಯಿಸುವ ಹಕ್ಕನ್ನು ಆತನ ಹೆಂಡತಿ ಅಥವಾ ಬೆಳೆದ ಮಗನಿಗೆ ಕೊಡಬೇಕು. ಹೀಗೆ ಮಾಡದಿದ್ದರೆ ಕನಿಷ್ಠ 20 ಲಕ್ಷ ಸೈನಿಕರ ಮತಗಳು ಚಲಾವಣೆ ಆಗೋದೇ ಇಲ್ಲ.
  • ಸಂಸತ್ತಿನಲ್ಲಿ ಮಹಿಳೆಯರಿಗೆ 33 ಪ್ರತಿಶತ ಪ್ರಾತಿನಿಧ್ಯ ಸಿಗಬೇಕು ಎಂಬ ಆಗ್ರಹ ಈಗ ತಣ್ಣಗಾಗಿಹೋಗಿದೆ. ಅದಕ್ಕೆ ಬದಲು ಚುನಾವಣಾ ಕಣಕ್ಕೆ ಧುಮುಕುವಾಗಲೇ ಮಹಿಳೆಯರಿಗೆ ಇಂತಿಷ್ಟು ಸ್ಥಾನ ಅಂತ ಮೀಸಲಿಡುವುದು ಒಳ್ಳೆಯದು.
  • ಪ್ರತಿಶತ 50ರಷ್ಟು ಮತದಾನ ಆಗದಿದ್ದಲ್ಲಿ, ಹೆಚ್ಚು ಮತ ಗಳಿಸುವವರನ್ನು ಚುನಾಯಿತರೆಂದು ಘೋಷಿಸಬಾರದು. ಹೀಗಾದಾಗ, ಮೊದಲ ಎರಡು ಸ್ಥಾನದಲ್ಲಿರುವವರ ನಡುವೆ ಪುನರ್‌ ಚುನಾವಣೆ ನಡೆಯಬೇಕು. ಫ್ರಾನ್ಸ್‌ನಲ್ಲಿ ಚುನಾವಣೆ ನಡೆಯುತ್ತಿರುವುದು ಇದೇ ರೀತಿ.
ಅಂದಹಾಗೆ, ಬೆಂಗಳೂರಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ನಲ್ಲಿ ಬುಧವಾರ ರಾತ್ರಿ ‘ಚುನಾವಣಾ ಸುಧಾರಣೆ’ ಎಂಬ ವಿಷಯ ಕುರಿತು ಮಾತಾಡಿದಾಗ ಗಿಲ್‌ ಈ ಸಲಹೆಗಳನ್ನು ಕೊಟ್ಟರು. ಗಿಲ್‌ ಸಲಹೆಗಳನ್ನು ನೀವು ಒಪ್ಪುವಿರಾ?

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X