ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘2 ವರ್ಷದಲ್ಲಿ ಜಿಲ್ಲಾ ಗ್ರಂಥಾಲಯಗಳ ಕಂಪ್ಯೂಟರೀಕರಣ’

By Staff
|
Google Oneindia Kannada News

ಬೆಂಗಳೂರು : ಇನ್ನೆರಡು ವರ್ಷಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರ ಗ್ರಂಥಾಲಯಗಳ ಕಂಪ್ಯೂಟರೀಕರಣ ಆಗಲಿದ್ದು, ಇಂಟರ್ನೆಟ್‌ ಸಂಪರ್ಕ ಕೂಡ ಒದಗಿಸಲಾಗುವುದು ಎಂದು ಗ್ರಂಥಾಲಯ ಮತ್ತು ವಯಸ್ಕರ ಶಿಕ್ಷಣ ಸಚಿವ ಬಾಬುರಾವ್‌ ಚವ್ಹಾಣ್‌ ಹೇಳಿದರು.

ಭಾರತೀಯ ಗ್ರಂಥಾಲಯಗಳ ಸಂಘದ 48ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ (ಜ.22) ಚವ್ಹಾಣ್‌ ಮಾತಾಡುತ್ತಿದ್ದರು. ಕಳೆದ ವರ್ಷ ಹಾಗೂ ಈ ವರ್ಷ ಒಟ್ಟು 18 ಗ್ರಂಥಾಲಯಗಳನ್ನು ಕಂಪ್ಯೂಟರೀಕರಣಗೊಳಿಸಿದ್ದೇವೆ. ಇನ್ನೆರಡು ವರ್ಷಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರ ಗ್ರಂಥಾಲಯಗಳೂ ಕಂಪ್ಯೂಟರೀಕರಣಗೊಳ್ಳಲಿವೆ. ವ್ಯವಸ್ಥಿತ ಮಾಹಿತಿ ನಿರ್ವಹಣೆಗೆ ಮತ್ತು ಅಗತ್ಯ ಮಾಹಿತಿ ಕಲೆ ಹಾಕಲು ಇಂಟರ್ನೆಟ್‌ ಸಂಪರ್ಕವನ್ನೂ ಒದಗಿಸಲಾಗುವುದು ಎಂದರು.

ಕಂಪ್ಯೂಟರೀಕರಣದ ನಿಟ್ಟಿನಲ್ಲಿ ಸಮಗ್ರವಾಗಿ ಚರ್ಚಿಸಲು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚಿ ಮೊದಲ ವಾರದಲ್ಲಿ ಎಲ್ಲಾ ರಾಜ್ಯಗಳ ಗ್ರಂಥಾಲಯ ಸಭೆ ಕರೆಯಲಾಗುವುದು. ಮಾಹಿತಿ ತಂತ್ರಜ್ಞಾನವನ್ನು ಗ್ರಂಥಾಲಯ ವ್ಯವಸ್ಥೆಯಲ್ಲಿ ಸಮರ್ಪಕ ರೀತಿಯಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಚವ್ಹಾಣ್‌ ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತಾಡಿದ ಪ್ರೊ.ಬಿ.ಕೆ.ಚಂದ್ರಶೇಖರ್‌, ಗ್ರಂಥಾಲಯಗಳ ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ತಂತ್ರಜ್ಞಾನ ಪ್ರಗತಿ, ಯಾಂತ್ರಿಕ ಗತಿ- ಇವುಗಳ ನಡುವೆಯೂ ಪುಸ್ತಕ ಸಂಸ್ಕೃತಿ ಸದಾ ಜೀವಂತವಾಗಿದೆ. ಪುಸ್ತಕ ಸಂಸ್ಕೃತಿ ಯಾವತ್ತೂ ಅಳಿಯುವುದಿಲ್ಲ ಎಂದು ಬಿ.ಕೆ.ಸಿ. ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X