ತೊಗಾಡಿಯಾ ಮುಂಬಯಿ ಪ್ರವೇಶಕ್ಕೆ ನಿಷೇಧ

ಮುಂಬಯಿ: ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಭಾಯಿ ತೊಗಾಡಿಯಾ ಅವರು ಮುಂಬಯಿ ಪ್ರವೇಶಿಸುವುದನ್ನು ಮಹಾರಾಷ್ಟ್ರ ಸರಕಾರ ನಿಷೇಧಿಸಿದೆ.

2004ನೇ ವರ್ಷದಲ್ಲಿ ಮತ್ತೆ ಚುನಾವಣೆ ಬರಲಿದೆ. ಚುನಾವಣೆಗಾಗಿ ವಿಹೆಚ್‌ಪಿಯು ಹಿಂದೂ ಧಾರ್ಮಿಕತೆಯ ಆಧಾರದ ಮೇಲೆ ಮತದಾರರನ್ನು ಒಗ್ಗೂಡಿಸುವುದಾಗಿ ಈ ಹಿಂದೆ ಗುಜರಾತ್‌ ಹಾಗೂ ದೆಹಲಿಯಲ್ಲಿ ತೊಗಾಡಿಯೂ ಸುದ್ದಿಗೋಷ್ಠಿಗಳಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತೊಗಾಡಿಯಾ ಅವರನ್ನು ಮಹಾರಾಷ್ಟ್ರಾದ ರಾಜಧಾನಿ ಪ್ರವೇಶಿಸುವುದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಕೃಪಾಶಂಕರ್‌ ಸಿಂಗ್‌ ತಿಳಿಸಿದ್ದಾರೆ.

ಮುಂದಿನ ಸೋಮವಾರ(ಡಿ. 23) ತೊಗಾಡಿಯಾ ಅವರು ಮುಂಬಯಿನ ಗೋರೆಗಾಂವ್‌ನಲ್ಲಿ ನಡೆಯುವ ವಿಹೆಚ್‌ಪಿ ಸಭೆಯಲ್ಲಿ ಭಾಗವಹಿಸಬೇಕಾಗಿದೆ. ನಂತರ ಡಿ. 29ರಿಂದ ಮೂರು ದಿನಗಳ ವಿಹೆಚ್‌ಪಿ ಸಮಾವೇಶವು ಪುಣೆಯಲ್ಲಿ ನಡೆಯಲಿದೆ.

ಕೋಮು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಸಾದ್ವಿ ಋತಂಬರಾ ಮತ್ತಿತರ ವಿಹೆಚ್‌ಪಿ ನಾಯಕರ ಮುಂಬಯಿ ಪ್ರವೇಶ ನಿಷೇಧದ ಬಗ್ಗೆ ಸರಕಾರ ಚಿಂತಿಸುತ್ತಿರುವುದಾಗಿ ಸರಕಾರಿ ಮೂಲಗಳು ಹೇಳಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+