ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋಗೆ ಸಿಸ್ಕೋದ ಪ್ರತಿಷ್ಠಿತ ಸ್ವರ್ಣ ಪ್ರಮಾಣ ಪತ್ರ

By Staff
|
Google Oneindia Kannada News

ಬೆಂಗಳೂರು : ವಿಪ್ರೋ ಇನ್ಫೋಟೆಕ್‌ನ 715 ದಶಲಕ್ಷ ಡಾಲರ್‌ ಬಂಡವಾಳದ ಭಾರತ, ಏಷ್ಯಾ ಪೆಸಿಫಿಕ್‌ ಮತ್ತು ಮಧ್ಯ ಪ್ರಾಚ್ಯದ ಐಟಿ ವಿಭಾಗಕ್ಕೆ ಸಿಸ್ಕೋ ಲಿಮಿಟೆಡ್‌ನ ಪ್ರತಿಷ್ಠಿತ ಸ್ವರ್ಣ ಪ್ರಮಾಣ ಪತ್ರ ಸಂದಿದೆ.

ಗ್ರಾಹಕರ ಬೇಡಿಕೆಗಳಿಗೆ ಗಂಭೀರವಾಗಿ ಸ್ಪಂದಿಸುವುದು, ತರಪೇತಿ, ಬೆಂಬಲ ಮತ್ತು ಕಾರ್ಯ ನಿರ್ವಹಣೆಯಲ್ಲಿ ವಿಶೇಷತೆ- ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಪ್ರೋಗೆ ಸಿಸ್ಕೋ ಸ್ವರ್ಣ ಪ್ರಮಾಣ ಪತ್ರ ನೀಡಿದೆ. ಸಿಸ್ಕೋದ ತೊಂದರೆ ನಿವಾರಕ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ಒದಗಿಸುವಲ್ಲಿಯೂ ವಿಪ್ರೋ ಪರಿಣತಿ ಕೆಲಸಕ್ಕೆ ಬಂದಿರುವುದರಿಂದ ಈ ಪ್ರಮಾಣ ಪತ್ರ ಸಂದಿದೆ.

ಜಾಗತಿಕ ಐಟಿ ಮಾರುಕಟ್ಟೆಯಲಿ ್ಲ ಕೆಲವು ಸರ್ಕಾರಗಳು ಮತ್ತು ಬೃಹತ್‌ ನಿಗಮಗಳಿಗೆ ಪ್ರಸ್ತಾವನೆ ಕೊಡಬೇಕಾದಾಗ ಈ ಸ್ವರ್ಣ ಪ್ರಮಾಣ ಪತ್ರ ಹೊಂದಿರಬೇಕಾದ್ದು ಕಡ್ಡಾಯವಾಗಿದೆ. ಈಗ ಅದು ವಿಪ್ರೋಗೆ ಸಂದಿರುವುದರಿಂದ ವಹಿವಾಟು ಇನ್ನಷ್ಟು ಚುರುಕಾಗಲಿದೆ ಎಂದು ಕಂಪನಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X