ಕಾವೇರಿ ಚಳವಳಿಗೆ ಅಲ್ಪ ವಿರಾಮ , ಎಲ್ಲರಿಗೂ ಧನ್ಯವಾದಗಳು...
ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕಳೆದ 39 ದಿನಗಳಿಂದ ನಡೆಯುತ್ತಿದ್ದ ಚಳವಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ.
ಅಕ್ಟೋಬರ್ 24 ರಂದು ಸುಪ್ರಿಂಕೋರ್ಟ್‌ನಲ್ಲಿ ಕಾವೇರಿ ಪ್ರಕರಣ ಮತ್ತೆ ಚರ್ಚೆಗೆ ಬರಲಿದೆ. ನ್ಯಾಯಾಲಯದ ತೀರ್ಪು ರಾಜ್ಯಕ್ಕೆ ಮಾರಕವಾದರೆ ಮತ್ತೆ ಚಳವಳಿ ಮುಂದುವರಿಯುವುದು ಎಂದು ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಕಾವೇರಿ ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮನವಿ ಮಾಡಿಕೊಂಡಿರುವ ಮಾದೇಗೌಡ, ಚಳವಳಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications