ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ಸಿನ ಜಾಗಟೆ ಬಾರಿಸುವ ಇಸ್ರೋ ವಾಣಿಜ್ಯ ದೃಷ್ಟೀಲಿ ಠುಸ್ಸು !

By Staff
|
Google Oneindia Kannada News

ಹೈದರಾಬಾದ್‌ : ಹಾಗೆ ಮಾಡಿದಿವಿ, ಹೀಗೆ ಮಾಡಿದಿವಿ ಎನ್ನುವ ಇಸ್ರೋ ಕಿಸಿದಿರುವುದಾದರೂ ಏನನ್ನು? ವಾಣಿಜ್ಯ ದೃಷ್ಟಿಯಲ್ಲಿ ಇದೊಂದು ವೈಫಲ್ಯ ಎಂದು ದೂರಸಂಪರ್ಕ ಮತ್ತು ದೂರದರ್ಶಕ ಸೇವೆ ಒದಗಿಸುವ ಉಪಗ್ರಹ ನಿರ್ವಾಹಕರು ನಡೆಸಿರುವ ಸಮೀಕ್ಷೆ ಹೇಳಿದೆ.

ವಾರ್ಷಿಕ ಗಳಿಕೆಯ ಮಾನದಂಡದ ಪ್ರಕಾರ ಮುಂಚೂಣಿಯಲ್ಲಿರುವ 20 ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಯಾದಿಯ 20 ಸ್ಥಾನಗಳಲ್ಲಿ ಇಸ್ರೋಗೆ ಸ್ಥಾನವಿಲ್ಲ. ಕಳೆದೆರಡು ದಶಕಗಳಿಂದ ಇನ್‌ಸ್ಯಾಟ್‌ ಸಂವಹನಾ ಉಪಗ್ರಹಗಳನ್ನು ಉಡಾಯಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಡುತ್ತಿರುವ ಸದ್ದೇ ಹೆಚ್ಚು, ತರುತ್ತಿರುವ ಹಣ ತೀರಾ ಕಡಿಮೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ.

ಥೈಲ್ಯಾಂಡ್‌, ಸ್ಪೇನ್‌, ದಕ್ಷಿಣ ಕೊರಿಯಾ, ಬ್ರೆಜಿಲ್‌, ಸೌದಿ ಅರೇಬಿಯಾ, ಮೆಕ್ಸಿಕೋ ಮೊದಲಾದ ದೇಶಗಳು ಉಪಗ್ರಹ ಉಡಾವಣೆಗೆ ಶುರುವಿಟ್ಟಿಕೊಂಡದ್ದು ಭಾರತ ಆ ಕೆಲಸಕ್ಕೆ ತೊಡಗಿದ ಕೆಲವು ವರ್ಷಗಳ ನಂತರ. ಆದರೂ ಈ ರಾಷ್ಟ್ರಗಳು ‘ಸ್ಪೈ ನ್ಯೂಸ್‌’ನ ಟಾಪ್‌ 20 ಪಟ್ಟಿಯಲ್ಲಿ ಜಾಗ ಕಂಡುಕೊಂಡಿವೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನೆ- ಅಭಿವೃದ್ಧಿಯ ಅಧಿಕೃತ ಪ್ರಕಟಣೆ ಈ ಸ್ಪೈ ನ್ಯೂಸ್‌. ವಾಷಿಂಗ್ಟನ್‌ನಲ್ಲಿ ಇದು ಮುದ್ರಿತವಾಗುತ್ತಿದೆ.

ಯಾದಿಯಲ್ಲಿರುವ ಬಾಹ್ಯಾಕಾಶ ಸಂಶೋಧನೆಯ ಮೂಲಕ ಹಣ ಮಾಡಿರುವ ಸಂಸ್ಥೆಗಳ ಸಂಕ್ಷಿಪ್ತ ಪಟ್ಟಿ-

  • ಅಮೆರಿಕಾ ಮೂಲದ ಇಂಟೆಲ್‌ಸ್ಯಾಟ್‌ (1.1 ಬಿಲಿಯನ್‌ ಡಾಲರ್‌)
  • ಆ್ಯಮ್‌ಸ್ಯಾಟ್‌ (870.1 ದಶಲಕ್ಷ ಡಾಲರ್‌)
  • ಲುಕ್ಸೆಂಬರ್ಗ್‌ನ ಎಸ್‌ಇಎಸ್‌ ಆಸ್ಟ್ರಾ (655.5 ದಶಲಕ್ಷ ಡಾಲರ್‌)
  • ಫ್ರಾನ್ಸ್‌ನ ಯೂಟೆಲ್‌ಸ್ಯಾಟ್‌ (593.5 ದಶಲತ್ರ ಡಾಲರ್‌)
  • ಮೆಕ್ಸಿಕೋದ ಸಂಸ್ಥೆ (132.4 ದಶಲಕ್ಷ ಡಾಲರ್‌)
  • ಸೌದಿ ಅರೇಬಿಯಾದ ಅರಬ್‌ಸ್ಯಾಟ್‌ (155 ದಶಲಕ್ಷ ಡಾಲರ್‌)
  • ಬ್ರೆಜಿಲ್‌ ಸಂಸ್ಥೆ (130.5 ದಶಲಕ್ಷ ಡಾಲರ್‌)
  • ಪಟ್ಟಿಯ 20ನೇ ಸ್ಥಾನದಲ್ಲಿ ರಷ್ಯಾದ ಸಂಸ್ಥೆ ಇದೆ (61 ದಶಲಕ್ಷ ಡಾಲರ್‌)
ಐದು ಉಪಗ್ರಹಗಳನ್ನು ಉಡಾಯಿಸಿಯೂ ಯಾದಿಯಲ್ಲಿ ಸ್ಥಾನ ಕಂಡುಕೊಳ್ಳುವಲ್ಲಿ ಇಸ್ರೋ ವಿಫಲವಾಗಿದೆ. ಇದು ಯಾಕೆ ಎಂದು ಪ್ರಶ್ನಿಸಿದರೆ, ಸಂಸ್ಥೆಯ ಅಧಿಕಾರಿಗಳು ಉತ್ತರ ಕೊಡುತ್ತಿಲ್ಲ. ದೂರಗ್ರಾಹಿ ಉಪಗ್ರಹಗಳ ಆದಾಯದ ವಿಷಯಗಳು ಗೋಪ್ಯವಾಗಿವೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X