ಪ್ರವಾಸೀ ತಾಣವಾಗಿ ಮಲ್ಪೆ -ಹೊಸ ಡಿಸಿ ಉಮಾಶಂಕರ್ ಕನಸು
ಉಡುಪಿ : ಉಡುಪಿ ಜಿಲ್ಲಾಧಿಕಾರಿಯಾಗಿ ಉಮಾಶಂಕರ್ ಅವರು ಅಧಿಕಾರ ವಹಿಸಿಕೊಂಡಿದ್ದು ಜಿಲ್ಲೆಯ ನಿವಾಸಿಗಳು ಮತ್ತೆ ಅಭಿವೃದ್ಧಿಯ ಕನಸು ಕಾಣಲಾರಂಭಿಸಿದ್ದಾರೆ.
ಈವರೆಗೆ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಉಮಾಶಂಕರ್, ಗುರುವಾರ ಉಡುಪಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ತಂತ್ರಜ್ಞಾನದ ಯಶಸ್ವೀ ಬಳಕೆಗೆ ಹೆಚ್ಚಿನ ಒತ್ತು ಕೊಡುವುದಾಗಿ ಹೇಳಿದರು.
ಹಿಂದೆ ಹಮ್ಮಿಕೊಂಡಿರುವ ಎಲ್ಲ ಯೋಜನೆಗಳನ್ನೂ ಜಾರಿಗೊಳಿಸಲು ತಾವು ಶ್ರಮಿಸುವುದಾಗಿ ಉಮಾಶಂಕರ್ ಹೇಳಿದ್ದಾರೆ. ಮಲ್ಪೆ ಕರಾವಳಿಯನ್ನು ಅಭಿವೃದ್ಧಿ ಪಡಿಸಲು ವಿವರವಾದ ಯೋಜನೆಯಾಂದನ್ನು ಸದ್ಯದಲ್ಲೇ ರೂಪಿಸಲಾಗುವುದು. ಮಲ್ಪೆಯನ್ನು ಪ್ರವಾಸೀ ತಾಣವನ್ನಾಗಿ ಮಾರ್ಪಡಿಸುವ ಯೋಚನೆ ತಮಗಿದೆ ಎಂದು ಉಮಾಶಂಕರ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ವಾರಾಹಿ ನೀರು ಬಳಕೆಯ ಯೋಜನೆ, ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್ (ಎಸ್‌ಟಿಪಿಐ), ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications