‘ಇಂಡಿಗೋನೇಷನ್‌’ ಷರ್ಟು-ಪ್ಯಾಂಟು ಧರಿಸಲಿರುವ ಅನಿಲ್‌ಕುಂಬ್ಳೆ

ಬೆಂಗಳೂರು: ದವಡೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಇಂಗ್ಲೆಂಡ್‌ ಪ್ರವಾಸಕ್ಕೆ ತುದಿಗಾಲಲ್ಲಿ ನಿಂತಿರುವ ಭಾರತದ ಅಗ್ರಮಾನ್ಯ ಲೆಗ್‌ಸ್ಪಿನ್ನರ್‌ ಅನಿಲ್‌ ಕುಂಬ್ಳೆ, ವಸ್ತ್ರ ಜಗತ್ತಿನ ಜಾಗತಿಕ ಹುದ್ದರಿಗಳಲ್ಲೊಂದಾದ ‘ಇಂಡಿಗೋ ನೇಷನ್‌’ನ ‘ಬ್ರಾಂಡ್‌ ಅಂಬಾಸಡರ್‌’ ಆಗಿ ಆಯ್ಕೆಯಾಗಿದ್ದಾರೆ.

ಹೊಸ ಪೀಳಿಗೆಯ ಜೀವನಶೈಲಿಗೆ ಅನುಗುಣವಾಗಿ ತನ್ನ ಉತ್ಪನ್ನಗಳನ್ನು ರೂಪಿಸುತ್ತಿರುವ ಬೆಂಗಳೂರು ಮೂಲದ ಇಂಡಸ್‌ ಲೀಗ್‌-ಕ್ಲೋತಿಂಗ್‌ ಲಿಮಿಟೆಡ್‌ನ ಹೆಮ್ಮೆಯ ಕೂಸಾದ ಇಂಡಿಗೋ ನೇಷನ್‌ ರಾಯಭಾರಿಯಾಗಿ ಕುಂಬ್ಳೆ ಕಾಣಿಸಿಕೊಳ್ಳಲಿದ್ದಾರೆ. ಭಾರತ ಹಾಗೂ ವಿದೇಶಗಳಲ್ಲಿ ಕಂಪನಿಯ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅನಿಲ್‌ ಕುಂಬ್ಳೆ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವರು ಎಂದು ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಶ್ರೀರಾಂ ಶ್ರೀನಿವಾಸನ್‌ ಸೋಮವಾರ ತಿಳಿಸಿದ್ದಾರೆ.

ಜಾಗತಿಕ ಭಾರತೀಯನ ವಸ್ತ್ರಾಭಿರುಚಿಯ ಅಭಿವ್ಯಕ್ತಿಯಾಗಿರುವ ಇಂಡಿಗೋ ನೇಷನ್‌, ಮಧ್ಯಪ್ರಾಚ್ಯದಲ್ಲಿನ 8 ಆಕರ್ಷಕ ಷೋರೂಂ ಸೇರಿದಂತೆ 13 ರಾಷ್ಟ್ರಗಳಲ್ಲಿ ಮಾರುಕಟ್ಟೆ ಹೊಂದಿದೆ. ಕಂಪನಿಯ ಷರ್ಟು ಹಾಗೂ ಪ್ಯಾಂಟುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿನಿಧಿಸಲು ಕುಂಬ್ಳೆ ಸಮರ್ಥ ಅಭ್ಯರ್ಥಿ ಎಂದು ಶ್ರೀನಿವಾಸನ್‌ ಬಣ್ಣಿಸಿದರು. ಕುಂಬ್ಳೆಯಾಂದಿಗೆ ಕಂಪನಿ ಮಾಡಿಕೊಂಡ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಕುಂಬ್ಳೆ ಅವರೊಂದಿಗೆ ಒಪ್ಪಂದ ಸಾಧಿಸುವ ಮೂಲಕ ಇಂಡಿಗೋ ನೇಷನ್‌ ಹೊಸ ಕಳೆ ಹೊಂದಿದೆ ಎನ್ನುವುದು ಕಂಪನಿಯ ಮಾರುಕಟ್ಟೆ ನಿರ್ವಾಹಕ ವಿನೀತ್‌ ನಾಯರ್‌ ಅವರ ಅಭಿಪ್ರಾಯ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+