ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯೂಸಿ ಬಯಾಲಜಿ, ಕೆಮಿಸ್ಟ್ರಿ ಪಠ್ಯ ಇದೀಗ ಬೆರಳ ತುದಿಯಲ್ಲಿ

By Staff
|
Google Oneindia Kannada News

ಬೆಂಗಳೂರು : ಪಿಯೂಸಿ ವಿದ್ಯಾರ್ಥಿಗಳ ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಪಠ್ಯ ಇದೀಗ ಬೆರಳು ತುದಿಯಲ್ಲಿ. ಮನೆಯಲ್ಲೊಂದು ಕಂಪ್ಯೂಟರ್‌. ಅದರೊಳಗೆ ಸಿ.ಡಿ. ತುರುಕಿ ನೋಡಬಲ್ಲಷ್ಟು ಜ್ಞಾನ ಇರುವ ಯಾವುದೇ ವಿದ್ಯಾರ್ಥಿ ಕುಂತಲ್ಲೇ ಪಾಠ ಕಲಿಯುವ ಆಧುನಿಕ ಅವಕಾಶವಿದು. ಪಠ್ಯಗಳ ಕಾಂಪ್ಯಾಕ್ಟ್‌ ಡಿಸ್ಕ್‌ (ಸಿ.ಡಿ.) ಗಳನ್ನು ಮಾರುಕಟ್ಟೆಗೆ ತಂದಿರುವವರು ಶಿಕ್ಷಕ ಕೃಷ್ಣಾ ಫತೇಪುರ್‌. ಈ ಮಹತ್ವದ ಯೋಜನೆಯಲ್ಲಿ ಇವರಿಗೆ ನೆರವಾದವರು ಅಣ್ಣ ರಾಘವೇಂದ್ರ ಫತೇಪುರ್‌. ಈತ ಕೂಡ ಶಿಕ್ಷಕ ಅನ್ನೋದು ಬೋನಸ್‌.

ಸಿ.ಡಿ.ಗಳು ಹೇಗೆ ಪಾಠ ಮಾಡುತ್ತವೆ?
ಇನ್ನೂರಕ್ಕೂ ಹೆಚ್ಚು ಫ್ಲಾ ್ಯಷ್‌ ಅನಿಮೇಟೆಡ್‌ ಚಿತ್ರಗಳು, ಪಾಠಗಳಿಗೆ ಪೂರಕವಾದ ಪ್ರಯೋಗಗಳ ಪ್ರಾತ್ಯಕ್ಷಿಕೆ, 500ಕ್ಕೂ ಹೆಚ್ಚು ಚಿತ್ರಗಳು, 20 ವಿಡಿಯೋ ಕ್ಲಿಪಿಂಗ್‌ಗಳು, 3ಡಿ ಚಿತ್ರಗಳು.... ಪ್ರತಿ ವಿಷಯದ ಸಿ.ಡಿ. ಇವೆಲ್ಲವುಗಳಿಂದ ತುಂಬಿದೆ. ತಜ್ಞರು ಪ್ರಯೋಗ ಮಾಡಿ ವಿವರಿಸುವ ರೀತಿ ತರಗತಿಯ ಕಲಿಕೆಗೂ ಒಂದು ಹೆಜ್ಜೆ ಮುಂದಿದ್ದು, ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟಾಗುತ್ತದೆ ಎನ್ನುತ್ತಾರೆ ಫತೇಪುರ್‌ ಸೋದರರು. ಮಕ್ಕಳಿಗೆ ಒಂದು ಸಿನಿಮಾ ನೋಡುವಷ್ಟು ಕಲಿಕೆ ಸರಳವಾಗುವುದರಿಂದ ಪಾಠ ಬೇಗ ತಲೆಗೆ ಹತ್ತುತ್ತದೆ ಎನ್ನುವುದು ಇವರ ವಾದ.

ಫತೇಪುರ್‌ ಸೋದರರ ತಂಡದ ಹೆಸರು ಇ ಎಜು. ಕಳೆದ ವರ್ಷ ಭೌತಶಾಸ್ತ್ರದ ಪಠ್ಯ ವಿಷಯವನ್ನೂ ಇವರು ಸಿ.ಡಿ.ಗೆ ತುಂಬಿಸಿದ್ದರು. ಬೋಧನಾ ಕ್ರಮವನ್ನು ಹೆಚ್ಚು ಶ್ರೀಮಂತಗೊಳಿಸುವ ಪ್ರಯತ್ನಕ್ಕೆ ಕೈಹಾಕಿದ್ದರಿಂದ, 5 ಸಿ.ಡಿ.ಗಳು ಬೇಕಾದವು. ಹೀಗಾಗಿ ಸಾಮಾನ್ಯರಿಗೆ ಅದು ತುಟ್ಟಿಯಾಯಿತು, ಎಟುಕಲಿಲ್ಲ.

ಪಠ್ಯಗಳನ್ನಷ್ಟೇ ಅಲ್ಲದೆ ದ್ವಿತೀಯ ಪಿಯೂಸಿ ಪ್ರಶ್ನೆಪತ್ರಿಕೆ ಹಾಗೂ ಸಿಇಟಿ ಪತ್ರಿಕೆಗಳ ಸಿ.ಡಿ. ಗಳೂ ಮಾರುಕಟ್ಟೆಯಲ್ಲಿ ಲಭ್ಯ. ಇದೂ ಕೂಡ ಫತೇಪುರ್‌ ಸೋದರರ ವಿಕ್ರಮ. ಇಲ್ಲಿ ವಿದ್ಯಾರ್ಥಿಗಳು ಉತ್ತರ ನೀಡಿ, ಮೌಲ್ಯಮಾಪನವಾದ ಪ್ರತಿಯನ್ನೂ ನೋಡಬಹುದಾಗಿದೆ. ಅಂದಹಾಗೆ, ಪ್ರತಿ ಸಿ.ಡಿ.ಯ ಬೆಲೆ 945 ರುಪಾಯಿ. ಆಸಕ್ತರು 080- 6601198 ನಂಬರಿಗೆ ಫೋನಾಯಿಸಿ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X