ಸಂಜೆಯ ರಂಗಿಗೆ ಬಿಯರ್/ಬೌಲಿಂಗ್ ಜೊತೆಗೆ ಶಾಪಿಂಗ್

ಬೆಂಗಳೂರು ಪಬ್ ಕ್ರಾಲ್
(ರಾತ್ರಿ 7 ರಿಂದ 11)
ಬಿಯರ್ ಸಿಟಿ!
ಉದ್ಯಾನ ನಗರಿ, ಸಿಲಿಕಾನ್ ನಗರಿ ಎನ್ನುವ ಗರಿಗಳ ಜೊತೆಗೆ ಬೆಂಗಳೂರಿಗೆ ಇತ್ತೀಚಿಗೆ ಅಂಟಿಕೊಂಡಿರುವ ಗರಿ - ಬಿಯರ್ ಸಿಟಿ. ಬೆಂಗಳೂರು ಪಬ್ ಸಂಸ್ಕೃತಿಗೆ ದಕ್ಷಿಣ ಭಾರತದ ರಾಜಧಾನಿ . ನೀವು ಮಹಾನಗರದ ಪಬ್ ಸಂಸ್ಕೃತಿಯ ಅನುಭವ ಹೊಂದಬೇಕೆ? ಮೂರು ವಿವಿಧ ಬಾರ್/ ಬಿಯರ್ ಲಾಂಜ್‌ಗಳು ನಿಮ್ಮ ಆನಂದಕ್ಕಾಗಿ ಲಭ್ಯ.
ಒಬ್ಬರಿಗೆ 1500 ರುಪಾಯಿ ಅಥವಾ 33 ಡಾಲರ್ ಶುಲ್ಕ. ಸಾರಿಗೆ ಸೌಲಭ್ಯವೂ ಉಂಟು. ಪ್ರತಿ ಪಬ್‌ನಲ್ಲಿ 1 ಬಾಟಲ್ ಬಿಯರ್ ಹಾಗೂ ಲಘು ತಿನಿಸು ಸೇವನೆಯೂ ಈ ಶುಲ್ಕದಲ್ಲಿ ಸೇರಿದೆ. ಚಿಯರ್ಸ್ !
ಬಿಯರ್ ಮತ್ತು ಬೌಲಿಂಗ್
(ರಾತ್ರಿ 7 ರಿಂದ 11)
ಸಂಜೆ ಬಿಡುವಾಗಿದ್ದೀರಾ? ಬೇಸರವಾ? ಇಲ್ಲಿದೆ ನೋಡಿ ಮಜಾ, ಸಂಜೆಯ ರೋಮಾಂಚನ! ನಿಂತಲ್ಲೇ ನಿಂತ ಸಂಜೆಗೆ ಬೌಲಿಂಗ್ ಆಟ ಮತ್ತೇರಿಸಬಲ್ಲದು. ನಿಮ್ಮ ಖುಷಿಗೆ ಇದ್ದೇ ಇದೆ ನೊರೆ ನೊರೆಯ ಬಿಯರ್.
ಬಿಯರ್‌ನೊಂದಿಗೆ ಬೌಲಿಂಗ್ ಆಡಲು ರೆಡಿಯಾ? ಶುಲ್ಕ 1500 ರುಪಾಯಿ (33 ಡಾಲರ್) ಮಾತ್ರ. ಸಾರಿಗೆ ಉಚಿತ. ಬೌಲಿಂಗ್, ಬಿಯರ್‌ನೊಂದಿಗೆ ತಿನಿಸೂ ಉಂಟು. ಕಾಸ್ಮೋಪಾಲಿಟನ್ ಸಿಟಿಯಲ್ಲಿ ರುಚಿ ವೈವಿಧ್ಯಕ್ಕೇನು ಕೊರತೆ.
ಲೈಫ್‌ಸ್ಟೈಲ್ ಶಾಪಿಂಗ್
(ಸಂಜೆ 6 ರಿಂದ ರಾತ್ರಿ 11)
ಅತ್ಯುತ್ತಮ ದರ್ಜೆಯ ರೇಷ್ಮೆ ಬಟ್ಟೆಯ ಮಳಿಗೆಗಳು, ಚಿನ್ನಾಭರಣದ ಅಂಗಡಿಗಳು, ಕರ ಕುಶಲ ಕಲಾಕೃತಿಗಳ ಅಂಗಡಿಗಳು- ಸಂಜೆಯ ಶಾಪಿಂಗ್‌ಗೆ ಇನ್ನೇನು ಬೇಕು. ಶಾಪಿಂಗ್ ನಂತರ ಬೆಂಗಳೂರಿನ ಪ್ರಸಿದ್ಧ ಪಬ್‌ನಲ್ಲಿ ವಿಶ್ರಾಂತಿಯ ವ್ಯವಸ್ಥೆಯಿದೆ.
ಸಾರಿಗೆ, ಶಾಪಿಂಗ್ ಟ್ರಿಪ್, ಬಿಯರ್, ತಿನಿಸು ಎಲ್ಲವೂ ಸೇರಿ ಒಬ್ಬರಿಗೆ 1500 ರುಪಾಯಿ (33 ಡಾಲರ್) ಶುಲ್ಕ. ನಿಮ್ಮ ಶಾಪಿಂಗ್ ಸ್ಮರಣೀಯವಾಗಲಿ.
ಸಹಾಯ ಬೇಕೆ? ಪ್ರಿಯಾ ಅವರನ್ನು ಸಂಪರ್ಕಿಸಿ- ಫೋನು : 91805735289.












Click it and Unblock the Notifications