ಉಪ್ಪಾರಪೇಟೆ ಪೊಲೀಸರಿಂದ 8 ನೇಪಾಳಿ ಗೂರ್ಖಾ ಕೊಲೆಗಾರರ ಬಂಧನ
ಬೆಂಗಳೂರು : ಅನೇಕ ಕೊಲೆ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಟು ನೇಪಾಳಿ ಗೂರ್ಖಾಗಳನ್ನು ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದು , ಆರೋಪಿಗಳಿಂದ 1 ಲಕ್ಷ ರುಪಾಯಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಚೆ ಕಚೇರಿ ಹಾಗೂ ಶಾಲೆಗಳ ಕಾವಲುಗಾರರನ್ನು ಈ ಗೂರ್ಖಾಗಳು ಹತ್ಯೆ ಮಾಡಿದ್ದಾರೆ. ಆರೋಪಿಗಳ ಬಂಧನದಿಂದ ಐದು ನಿಗೂಢ ಕೊಲೆ ಪ್ರಕರಣಗಳು ಬಯಲಿಗೆ ಬಂಧಿವೆ ಎಂದು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಗತ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ತಿಳಿಸಿದರು.
ಹತ್ಯಾ ಪ್ರಕರಣಗಳ ಪ್ರಮುಖ ಆರೋಪಿ ಬಹದ್ದೂರ್ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳು ಬೆಂಗಳೂರು ಮಾತ್ರವಲ್ಲದೆ ದೇಶದ ವಿವಿಧ ನಗರಗಳಲ್ಲಿ ಅಪರಾಧ ಕೃತ್ಯಗಳೆಸಗಿದ್ದಾರೆ ಎಂದು ಸಾಂಗ್ಲಿಯಾನ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನಾ ವಾಚ್












Click it and Unblock the Notifications