ಡಾ।ಸಿ.ಆರ್.ಚಂದ್ರಶೇಖರ್, ಯಲ್ಲಪ್ಪ ರೆಡ್ಡಿಗೆ ಕೆಂಪೇಗೌಡ ಪ್ರಶಸ್ತಿ
ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ಮನೋ ವಿಜ್ಞಾನಿ ಡಾ।ಸಿ.ಆರ್.ಚಂದ್ರಶೇಖರ್, ಪ್ರಸಿದ್ಧ ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 36 ಗಣ್ಯರಿಗೆ ಬೆಂಗಳೂರು ಮಹಾನಗರ ಪಾಲಿಕೆ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದೆ.
ಕೆಂಪೇಗೌಡ ದಿನಾಚರಣೆಯ ಅಂಗವಾಗಿ ಪ್ರತಿವರ್ಷ ನಗರ ಪಾಲಿಕೆ ಈ ಪ್ರಶಸ್ತಿಗಳನ್ನು ನೀಡುತ್ತಿದ್ದು , ಮೇಯರ್ ಚಂದ್ರಶೇಖರ್ ನೇತೃತ್ವದ ಆಯ್ಕೆ ಸಮಿತಿ ಈ ವರ್ಷದ ಪ್ರಶಸ್ತಿಗಳನ್ನು ಅಂತಿಮಗೊಳಿಸಿದೆ. ಪ್ರಶಸ್ತಿಗಾಗಿ 300 ನಾಮ ನಿರ್ದೇಶಗಳು ಪಾಲಿಕೆಗೆ ಬಂದಿದ್ದು , ಅದರಲ್ಲಿ 36 ಮಂದಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪಡೆದವರು :
ಎ.ಎನ್. ಯಲ್ಲಪ್ಪರೆಡ್ಡಿ (ಪರಿಸರ), ಟಿ.ನಾಗರಾಜು, ಎಂ.ಎ.ಪೊನ್ನಪ್ಪ , ಬಿ.ಜಿ.ಗುಜ್ಜಾರಪ್ಪ (ಪತ್ರಿಕೋದ್ಯಮ), ಡಾ।ಸಿ.ಆರ್.ಚಂದ್ರಶೇಖರ್, ಡಾ।ಸಿ.ಎಸ್.ಹನುಮಂತಪ್ಪ (ವೈದ್ಯಕೀಯ), ಡಾ।ಸಿ.ವಿ.ಶ್ರೀನಾಥಶಾಸ್ತ್ರಿ (ವಿಜ್ಞಾನ-ತಂತ್ರಜ್ಞಾನ), ಆರ್. ಲಕ್ಷಣ್ (ಸಿನಿಮಾ), ಡಾ।ಕೆ.ಎನ್.ಸಮೀರ ಸಿಂಹ, ವಿ.ಪಿ.ದಾರುಕಾರಾಧ್ಯ, ಪ್ರೊ। ಪಿ. ಸದಾಶಿವ (ಶಿಕ್ಷಣ), ಡಿ.ಎ.ಪಾಂಡು, ಡಬ್ಲ್ಯು.ಪಿ.ಕೃಷ್ಣ (ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ), ಸಿ.ಎಂ.ನವೀನ್ ಕುಮಾರ್ (ಕಬಡ್ಡಿ ), ಎನ್.ಕೆ.ಪಲ್ಲವಿ (ನೆಟ್‌ಬಾಲ್), ಎನ್.ಪ್ರತಿಭಾ (ಕತ್ತಿ ವರಸೆ), ಡೇವಿಡ್ ಪ್ರೇಮನಾಥ್ (ಅಥ್ಲೆಟಿಕ್ಸ್) , ಕೆ.ಚಂದ್ರಶೇಖರ್ (ಕುಸ್ತಿ ), ನರಸಿಂಹಯ್ಯ (ಕ್ರೀಡಾ ತರಬೇತಿ), ಡಾ। ಓಂಕಾರ್ (ಯೋಗ), ಡಾ। ಎಂ.ಜಯರಾಮಯ್ಯ, ಸುರೇಶ್ ಮೂನ, ವತ್ಸಲಾ ಅಯ್ಯಂಗಾರ್ (ಸಂಶೋಧನೆ), ಶ್ರೀಲಲಿತ, ಎಸ್.ಲಕ್ಕಣ್ಣ (ಕಿರುತೆರೆ), ಗೌತಮ ವರ್ಮಾ, ರತ್ನಾ ನಾಗೇಶ್, ಬಿ.ಕೆ.ಶಿವರಾಮ್, ಶ್ರಮಶ್ರೀ ನಾಗರಾಜ್, ಸೌಭಾಗ್ಯ ಈಶ್ವರಯ್ಯ (ಸಾಧನೆ), ಸುರೇಖಾ (ನೃತ್ಯ), ಮಾ.ನ.ಮೂರ್ತಿ (ರಂಗಭೂಮಿ), ಎನ್.ಪುಟ್ಟರುದ್ರ, ಎಂ.ನರಸಿಂಹ ಮತ್ತು ಎನ್.ಸಿ.ಭಂಡಾರಿ (ಸಮಾಜ ಸೇವೆ).
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications