ದಲಿತನ ಮೇಲೆ ಹಲ್ಲೆ : ಸಂಪುಟದಿಂದ ಸಚಿವರ ಕೈ ಬಿಡಲು ಬಿಜೆಪಿ ಪಟ್ಟು
ಮಂಗಳೂರು : ದಲಿತ ಯುವಕನ ಮೇಲಿನ ಹಲ್ಲೆಯ ಪ್ರಕರಣದಲ್ಲಿ ಭಾಗಿಯಾಗಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಂ.ದಿವಾಕರ ಬಾಬು ಅವರನ್ನು ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ವಿ.ಎಸ್.ಆಚಾರ್ಯ ಹಾಗೂ ಡಿ.ಎಚ್.ಶಂಕರಮೂರ್ತಿ ಒತ್ತಾಯಿಸಿದ್ದಾರೆ.
ಏಪ್ರಿಲ್ 14 ರಂದು ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ದಲಿತ ಯುವಕ ವಿನೋದ್ ಕುಮಾರ್ ಮೇಲೆ ಸಚಿವ ದಿವಾಕರ ಬಾಬು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದು , ಈ ಹಲ್ಲೆಯಲ್ಲಿ ಸಚಿವರ ಪಾತ್ರವೂ ಇದೆ. ಅಂಬೇಡ್ಕರ್ ಜಯಂತಿ ದಿನವೇ ಈ ನಾಚಿಕೆಗೇಡು ಕೃತ್ಯ ನಡೆದಿದೆ ಎಂದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಆಚಾರ್ಯ -ಶಂಕರಮೂರ್ತಿ ಆಪಾದಿಸಿದರು.
ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಳಂಕಿತರಾಗಿರುವ ಸಚಿವರನ್ನು ತಕ್ಷಣವೇ ಬಂಧಿಸಬೇಕು ಎಂದೂ ಆಚಾರ್ಯ- ಶಂಕರಮೂರ್ತಿ ಒತ್ತಾಯಿಸಿದರು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications