ಧಾರವಾಡದಲ್ಲಿ ಜುಲೈ 29ರಿಂದ ಪರ್ತಗಳಿ ಸ್ವಾಮೀಜಿಯಿಂದ ಚಾತುರ್ಮಾಸ್ಯ
ಧಾರವಾಡ : ಗೋಕರ್ಣ ಪರ್ತಗಳಿ ಮಠದ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಜುಲೈ 29ರಿಂದ ಎರಡು ತಿಂಗಳ ಕಾಲ ಚಾತುರ್ಮಾಸ ಆಚರಣೆ ಆರಂಭಿಸಲಿದ್ದಾರೆ.
ಧಾರವಾಡದಲ್ಲಿ ಪರ್ತಗಳಿ ಶ್ರೀಗಳು ಚಾತುರ್ಮಾಸ್ಯ ಆಚರಿಸುತ್ತಿರುವ ಸಂದರ್ಭದಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ದುರ್ಗಾ ದೇವಿ ದೇವಸ್ಥಾನದ ಬಳಿಯಿರುವ ಸರಸ್ವತಿ ನಿಕೇತನದಲ್ಲಿ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಆಚರಿಸಲಿದ್ದಾರೆ ಎಂದು ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ವಾಸುದೇವ ಕಾಮತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಟ್ಕಳ ಮೂಲದ ಗೋಕರ್ಣ ಪರ್ತಗಳಿ ಮಠ ಈಗ ಗೋವಾದ ಕಾಣಕೋಣ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೌಡ ಸಾರಸ್ವತ ಸಮಾಜದ ನಾಯಕ, ವಿದ್ಯಾಧಿರಾಜ ತೀರ್ಥ ಸ್ವಾಮಿ ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1475ರಲ್ಲಿ ನಾರಾಯಣ ತೀರ್ಥ ಸ್ವಾಮೀಜಿಗಳಿಂದ ಆರಂಭವಾದ ಈ ಮಠದ 23ನೇ ಸ್ವಾಮೀಜಿಯಾಗಿರುವ ವಿದ್ಯಾಧಿರಾಜರು 1973ರಲ್ಲಿಯೇ ಅಧಿಕಾರ ಸ್ವೀಕರಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications