ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆತ್ಮ ಹತ್ಯೆ, ಅಡಿಕೆ ಬೆಳೆಯ ಗೋಳಿನತ್ತ ಗಮನಹರಿಸದ ಟೊಳ್ಳು ಬಜೆಟ್‌

By Staff
|
Google Oneindia Kannada News

ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ರಾಜ್ಯ ಸರಕಾರ ಒತ್ತು ನೀಡಿಲ್ಲ. ಆದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹ ಎಂದು ರಾಜ್ಯದ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಪ್ರತಿಕ್ರಿಯಿಸಿದ್ದಾರೆ.

ಎಲ್ಲ ತಾಲ್ಲೂಕುಗಳಲ್ಲಿ ದಾಸ್ತಾನು ಗೋದಾಮು, ಪ್ರಾದೇಶಿಕ ಮಟ್ಟದಲ್ಲಿ ಗೋದಾಮು ಸ್ಥಾಪನೆ, ಸಕ್ಕರೆ ಅಭಿವೃದ್ಧಿ ಮಂಡಳಿ ರಚನೆ, ಬೆಂಬಲ ಬೆಲೆಗೆ ಆವರ್ತ ನಿಧಿ ಹೆಚ್ಚಳದಂತಹ ಕ್ರಮಗಳಿಂದ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಹಾಯಕವಾಗಬಹುದು. ರಾಜ್ಯದ ಯೋಜನಾ ವೆಚ್ಚ ವೃದ್ಧಿಯಾಗದಿರುವುದು, ಕೃಷಿ ಕ್ಷತ್ರದ ಹೊಸ ಚಟುವಟಿಕೆಗಳತ್ತ ನಿರ್ಲಕ್ಷ್ಯ, ಮಾರಾಟ ತೆರಿಗೆ ಹೆಚ್ಚಿಸಿರುವುದರ ಬಗ್ಗೆ ಆತಂಕವಿದೆ. ಆದಾಗ್ಯೂ ಇದೊಂದು ಶ್ಲಾಘನಾರ್ಹ ಬಜೆಟ್‌ ಎಂದು ನಂಜುಡಪ್ಪ ಅಭಿಪ್ರಾಯಪಟ್ಟಿದ್ದಾರೆ.

ಅಭಿವೃದ್ಧಿಯತ್ತ ಗಮನ ಹರಿಸದಿರುವ ಟೊಳ್ಳುಬಜೆಟ್‌ ಎಂದು ಈ ಬಾರಿಯ ಮುಂಗಡ ಪತ್ರವನ್ನು ರಾಜ್ಯ ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಬಸವರಾಜ ಪಾಟೀಲ್‌ ಸೇಡಂ: ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಒದಗಿಸಲು ಬಜೆಟ್‌ನಲ್ಲಿ ಯಾವುದೇ ಯೋಜನೆಗಳಿಲ್ಲ.

ಜಗದೀಶ್‌ ಶೆಟ್ಟರ್‌: ರೈತರ ಸರಣಿ ಆತ್ಮಹತ್ಯೆ ಮತ್ತು ಅಡಿಕೆ ಬೆಳೆಗಾರರ ಹೋರಾಟದತ್ತ ಸರಕಾರ ಕಿಂಚಿತ್‌ ಗಮನ ಹರಿಸಿಲ್ಲ. ಅಡಿಕೆ ಮತ್ತು ಕಾಫಿ ಬೆಳೆಗಾರರ ಮನವಿ ಧಿಕ್ಕರಿಸಿ ಎಂದಿನಂತೆ ಶೇ 4ರ ತೆರಿಗೆ ಮುಂದುವರೆಸಲಾಗಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ 400 ಕೋಟಿ ರೂಪಾಯಿ ನಿಗದಿಪಡಿಸಿ ತಮ್ಮ ಊರಿನ ಪ್ರೇಮವನ್ನು ಕೃಷ್ಣ ಅವರು ಬಜೆಟ್‌ನಲ್ಲಿ ತೋರಿಸಿದ್ದಾರೆ.

ವಿಜಯ ಸಂಕೇಶ್ವರ: ಡೀಸೆಲ್‌, ಪೆಟ್ರೋಲ್‌ಗಳ ಕಲಬೆರಕೆ ತಡೆಯುವ ಬದಲು ಸರಕಾರ 15 ವರ್ಷಕ್ಕಿಂತ ಹಳೆಯ ವಾಹನ ಸಂಚಾರ ನಿಷೇಧಿಸಿರುವುದು ಅವೈಜ್ಞಾನಿಕ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X