ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನೆಸ್‌ ದಾಖಲೆ ಪುಸ್ತಕ ಅಶ್ಲೀಲವಾಗಿದೆ, ಅದು ಶಾಲೆಯ ಲೈಬ್ರರಿಗೆ ‘ಬೇಡ’

By Staff
|
Google Oneindia Kannada News

ಲಂಡನ್‌ : ಗಿನ್ನೆಸ್‌ ಪುಸ್ತಕ ಭಾರೀ ಸೆಕ್ಸಿ ಆಗಿದೆ. ಅದನ್ನು ಶಾಲಾ ಗ್ರಂಥಾಲಯಗಳಿಂದ ನಿಷೇಧಿಸಬೇಕು!

ಗಿನ್ನೆಸ್‌ ವಿಶ್ವ ದಾಖಲೆಗಳ ಪ್ರಕಾಶಕರಾದ ಗ್ಯುಲಾನೆ ಎಂಟರ್‌ಟೇನ್‌ಮೆಂಟ್‌ಗೆ ಇಂಗ್ಲೆಂಡಿನ ಶಾಲೆಯ ಮೇಡಂ ಒಬ್ಬರು ಈ ರೀತಿ ಪತ್ರ ಬರೆದಿದ್ದಾರೆ. ಮೆಲ್‌ ಕಲ್ವರ್‌ ಎಂಬ ಮೇಡಂಗೆ ಮಕ್ಕಳ ತುಂಟಾಟ ಅತಿಯಾದುದನ್ನು ಸಹಿಸಲಾಗುತ್ತಿಲ್ಲ. ಭಣಗುಟ್ಟುತ್ತಿದ್ದ ಲೈಬ್ರರಿ ತುಂಬಾ ಗಂಡು ಹುಡುಗರು ಗಿಜಿಗಿಜಿ ಗುಡುವುದನ್ನು ಕಂಡು ಮೇಡಂಗೆ ಅಚ್ಚರಿ. ಏನನ್ನು ಓದಲು ಈ ಪರಿ ಹುಡುಗರು ನುಗ್ಗುತ್ತಿರುವರೆಂದು ನೋಡಿದರೆ ಗಿನ್ನೆಸ್‌ ದಾಖಲೆ ಪುಸ್ತಕ. ಅದರಲ್ಲಿ ಅಂಥಾದ್ದೇನಿದೆ ಅಂತ ಗಮನಿಸಿದರೆ, ಬಿಕಿನಿ ತೊಟ್ಟ ಹುಡುಗಿಯರ ಫೋಟೋಗಳು!

ಇಂಥಾ ಚಿತ್ರಗಳನ್ನು ಬಾಯಿಬಿಟ್ಟು ನೋಡುತ್ತಿರುವ ಮಕ್ಕಳು ಮೇಡಂಗಳನ್ನೂ ಕೆಟ್ಟ ದೃಷ್ಟಿಯಿಂದ ನೋಡಲು ಶುರುವಿಡುತ್ತಾರೆ. ಈ ಪುಸ್ತಕದಿಂದ ಮಕ್ಕಳು ಕಲಿಯುವುದಾದರೂ ಏನು ಎಂದು ಪ್ರಶ್ನಿಸಿರುವ ಕಲ್ವರ್‌ ಮೇಡಂ ಅದನ್ನು ಶಾಲೆಯಿಂದ ನಿಷೇಧಿಸುವಂತೆ ದೂರು ಪತ್ರ ಬರೆದಿದ್ದಾರೆ.

ಗ್ಯುಲಾನೆ ಎಂಟರ್‌ಟೇನ್‌ಮೆಂಟ್‌ನ ಕೌಥ್ರಾ ಬರ್ಸ್‌ , ‘ಶಾಲೆಗಳಿಗೆ ಈ ಪುಸ್ತಕ ಮಾಹಿತಿ ಪೂರಕವಾಗಿದೆ. ಆ ಕಾರಣಕ್ಕೇ ಗ್ರಂಥಾಲಯಗಳಿಗೆ ಇದು ಅವಶ್ಯಕ ಅಂತ ತೀರ್ಮಾನಿಸಿರುವುದು. ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ ಯಾವುದೇ ಬುರ್ನಾಸು ಸಂಗತಿಗಳಿಲ್ಲ. ನಿಮ್ಮ ದೂರನ್ನು ಪರಿಶೀಲಿಸಲಾಗುವುದು’ ಎಂದು ಮುಗುಮ್ಮಾಗಿ ಉತ್ತರ ಬರೆದಿದ್ದಾರೆ.

ಈ ಉತ್ತರ ಓದುತ್ತಿದ್ದ ಕಲ್ವರ್‌ ಮೇಡಂನ ಯಾರೋ ಹುಡುಗ ಕೆಟ್ಟದಾಗಿ ನೋಡಿದ ಕಾರಣ, ಅವರು ಇನ್ನಷ್ಟು ಕೆಂಡಾಮಂಡಲವಾಗಿದ್ದಾರೆ !

(ಇನ್ಫೋ ವಾರ್ತೆ)

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X