ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಕ್ಷ್ಮ ಪ್ರದೇಶಗಳಲ್ಲಿ ವಿದೇಶಿ ಕಂಪ್ಯೂಟರ್‌ ತಜ್ಞರಿಗೆ ಖೊಕ್‌ -ಪೆಂಟಗನ್‌

By Staff
|
Google Oneindia Kannada News

ವಾಷಿಂಗ್ಟನ್‌ : ಸೆಪ್ಟಂಬರ್‌ 11 ರ ದುರಂತದ ನಂತರ ಭಾರೀ ಹುಷಾರಾಗಿರುವ ಪೆಂಟಗನ್‌, ಕೆಲವು ಸೂಕ್ಷ್ಮ ಜಾಗೆಗಳಲ್ಲಿ ವಿದೇಶಿ ಕಂಪ್ಯೂಟರ್‌ ತಜ್ಞರಿಗೆ ಕೆಲಸದ ಅವಕಾಶಗಳನ್ನು ನಿಷೇಧಿಸಲು ಉದ್ದೇಶಿದೆ.

ಈಗಾಗಲೇ ಸೂಕ್ಷ್ಮ ಜಾಗೆಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಕೆಲಸಗಾರರಿಗೆ ಪೆಂಟಗನ್‌ ಸೂಚನೆಗಳನ್ನು ಕಳುಹಿಸಿದ್ದು , ಇನ್ನೆರಡು ಮೂರು ತಿಂಗಳಲ್ಲಿ - ಆ ಜಾಗೆಗಳಲ್ಲಿ ಸ್ವದೇಶಿಯರನ್ನು ನೇಮಿಸುವ ಕೆಲಸ ಪೂರ್ಣಗೊಳ್ಳಲಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ವಿದೇಶಿಯರು ಆ ಹುದ್ದೆಗಳಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ ಎಂದು ರಕ್ಷಣಾ ಇಲಾಖೆಯ ಕಾರ್ಯದರ್ಶಿ ಪೀಟ್‌ ನೆಲ್ಸನ್‌ ಹೇಳಿಕೆಯಾಂದರಲ್ಲಿ ತಿಳಿಸಿದ್ದಾರೆ.

ಕೆಲವು ವರ್ಷಗಳ ಅಧ್ಯಯನದ ನಂತರ ಈ ನೀತಿಯನ್ನು ರೂಪಿಸಲಾಗಿದೆ. ನಾವು ನಮ್ಮ ರಕ್ಷಣಾ ವ್ಯವಸ್ಥೆಯ ಅಗತ್ಯಗಳಿಗನುಸಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇನ್ನು 60-90 ದಿನಗಳಲ್ಲಿ ನೂತನ ನೀತಿ ಜಾರಿಗೆ ಬರಲಿದೆ ಎಂದು ನೆಲ್ಸನ್‌ ಹೇಳಿದ್ದಾರೆ. ಈ ನೀತಿಯನ್ವಯ ಎಷ್ಟು ಭಾರತೀಯರು ಕೆಲಸ ಕಳೆದುಕೊಳ್ಳುವರೋ?

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X