ಏಳು ವರ್ಷಗಳಲ್ಲಿ ಭವ್ಯ ಭಾರತದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ!!!
ಬೆಂಗಳೂರು : ಮುಂದಿನ ಏಳು ವರ್ಷಗಳಲ್ಲಿ ದೇಶದ ಪ್ರತಿಯಾಂದು ಹಳ್ಳಿಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು , ಪ್ರಸಕ್ತ ಆರ್ಥಿಕ ವರ್ಷದಲ್ಲಿ 450 ಕೋಟಿ ರುಪಾಯಿಗಳನ್ನು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಖರ್ಚು ಮಾಡಲಿದೆ.
ವಿದ್ಯುತ್ ಸಂಪರ್ಕಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ನಾವು ಗಮನ ಹರಿಸಿದ್ದೇವೆ. ವಿದ್ಯುತ್ತನ್ನು ಗ್ರಾಮೀಣರತ್ತ ಹಾಗೂ ಸಮುದಾಯಗಳತ್ತ ಒಯ್ಯುವುದು ನಮ್ಮ ಗುರಿಯಾಗಿದೆ ಎಂದು ಗ್ರಾಮೀಣ ವಿದ್ಯುದೀಕರಣ ನಿಗಮದ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ದಿವಾಕರ್ ದೇವ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ವಿದ್ಯುತ್ ಉಪ ಕೇಂದ್ರಗಳ ಅಭಿವೃದ್ಧಿ ಪಡಿಸಲು ಹಾಗೂ ಮೇಲ್ದರ್ಜೆಗೇರಿಸಲು ನಿಗಮ 4500 ಕೋಟಿ ರುಪಾಯಿ ಸಾಲ ನೀಡಲಿದೆ. ಪ್ರಸಕ್ತ ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ತಪ್ಪಿರುವ ಸಂಪರ್ಕಗಳನ್ನು ಸರಿಪಡಿಸಲು ಹಾಗೂ ಹಾಳಾಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಸರಿಪಡಿಸಲು ನಿಗಮ ಒತ್ತು ನೀಡುವುದು ಎಂದು ದಿವಾಕರ್ ದೇವ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications