ಆನ್‌ಲೈನ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಲ್ಯಾಬ್‌ಜರ್ನಲ್‘ವಿದ್ಯಾಸಮಾಚಾರ್’
ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರತರುತ್ತಿರುವ ವಿದ್ಯಾ ಸಮಾಚಾರ್ ಲ್ಯಾಬ್ ಜರ್ನಲ್ ಈಗ ಅಂತರ್ಜಾಲದಲ್ಲಿ ಲಭ್ಯ.
ಕರ್ನಾಟಕ ಪತ್ರಿಕಾ ಅಕಾಡೆಮಿಯ ಅಧ್ಯಕ್ಷ ಅರ್ಜುನ್ ದೇವ್ ಮಾರ್ಚ್ 2ರಂದು ವಿದ್ಯಾ ಸಮಾಚಾರ್ ಲ್ಯಾಬ್ ಜರ್ನಲ್‌ನ ಆನ್‌ಲೈನ್ ಆವೃತ್ತಿಯನ್ನು ಉದ್ಘಾಟಿಸಿದರು. ವಿದ್ಯಾಸಮಾಚಾರ್ ಪತ್ರಿಕೆಯನ್ನು ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೇ ಹೊರತರುತ್ತಿದ್ದು ಪ್ರತಿವಾರ ಪತ್ರಿಕೆ ಬಿಡುಗಡೆಯಾಗುತ್ತದೆ.
ಕನ್ನಡ ಮತ್ತು ಇಂಗ್ಲಿಷ್, ಎರಡೂ ಭಾಷೆಗಳಲ್ಲಿ ಪ್ರಕಟವಾಗುತ್ತದೆ. ವೆಬ್‌ಸೈಟಿನಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಸಂಬಂಧಿಸಿದ ಸುದ್ದಿ ಸಮಾಚಾರಗಳೂ ಪ್ರಕಟವಾಗುತ್ತಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications